alex Certify
ಕನ್ನಡ ದುನಿಯಾ       Mobile App
       

Kannada Duniya

ತವರಿಗೆ ಮರಳಲು 1000 ಕಿಮೀ ನಡೆದ ಭಾರತೀಯ

dubai-man_650x400_81480430207

ದುಬೈನಲ್ಲಿರುವ ಭಾರತೀಯ ಮೂಲದ ವಲಸಿಗನೊಬ್ಬ ತವರಿಗೆ ಮರಳುವ ಪ್ರಯತ್ನದಲ್ಲಿ ಕೋರ್ಟ್ ಪ್ರಕ್ರಿಯೆಗಳಿಗೆ ಹಾಜರಾಗಲು 1000 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾನೆ. 48 ವರ್ಷದ ಜಗನ್ನಾಥನ್ ಸೆಲ್ವರಾಜ್ ತಮಿಳುನಾಡಿನ ತಿರುಚಿರಾಪಳ್ಳಿ ಮೂಲದವರು. ತಮಿಳುನಾಡಿನಲ್ಲಿರೋ ಅವರ ತಾಯಿ ಮೃತಪಟ್ಟಿದ್ರು, ಆದ್ರೆ ಅವರ ಅಂತಿಮ ಸಂಸ್ಕಾರಕ್ಕೆ ತೆರಳಲು ಜಗನ್ನಾಥನ್ ಗೆ ಅವಕಾಶ ಕೊಟ್ಟಿರಲಿಲ್ಲ.

ಅವರ ಕೇಸ್ ಸತತ 2 ವರ್ಷಗಳವರೆಗೆ ನಡೀತು. ಈ ವೇಳೆ ದುಬೈನ ಸೋನಾಪುರದಿಂದ ಕರಮ ಜಿಲ್ಲೆಗೆ ಕೋರ್ಟ್ ಪ್ರಕ್ರಿಯೆಗಾಗಿ 20 ಬಾರಿ ಬಂದು ಹೋಗಿದ್ದಾರೆ. ಪ್ರತಿಬಾರಿ 50 ಕಿಮೀ ದೂರವನ್ನು ಕಾಲ್ನಡಿಗೆಯಲ್ಲೇ ಕೇವಲ 4 ಗಂಟೆಗಳಲ್ಲಿ ಕ್ರಮಿಸಿದ್ದಾರೆ. ಯಾಕಂದ್ರೆ ಅವರು ನೆಲೆಸಿರುವ ಸೋನಾಪುರದಿಂದ ದುಬೈ ಹೊರವಲಯದಲ್ಲಿರುವ ಕೋರ್ಟ್ ಗೆ ಹಾಜರಾಗಲು ಬಸ್ ವ್ಯವಸ್ಥೆ ಇಲ್ಲ. ಕಳೆದ ಕೆಲವು ತಿಂಗಳುಗಳಿಂದ ಪಬ್ಲಿಕ್ ಪಾರ್ಕ್ ಒಂದರಲ್ಲಿ ಉಳಿದುಕೊಂಡಿರುವ ಜಗನ್ನಾಥನ್ ಭಾರತಕ್ಕೆ ಮರಳಲು ಕಾತರರಾಗಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...