alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾ ಪ್ರವಾಸ ತೆರಳಬಯಸುವ ಭಾರತೀಯರಿಗೆ ಗುಡ್ ನ್ಯೂಸ್

ಶ್ರೀಲಂಕಾ ಪ್ರವಾಸ ಮಾಡಬೇಕು ಅಂತಿರೋ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣಾವಕಾಶ ಕಲ್ಪಿಸಲು ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ. ಭಾರತ ಮಾತ್ರವಲ್ಲದೆ ಚೀನಾದ ಪ್ರವಾಸಿಗರಿಗೆ ಕೂಡ ವೀಸಾ ವಿನಾಯಿತಿ ನೀಡಲು ಶ್ರೀಲಂಕಾ ಚಿಂತನೆ ನಡೆಸಿದೆ. ಶ್ರೀಲಂಕಾ ಪ್ರವಾಸೋದ್ಯಮ ಸಚಿವ ಜಾನ್ ಅಮೃತುಂಗೆ ನೇತೃತ್ವದ ಕಮಿಟಿ ಈ ಯೋಜನೆಯ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸುತ್ತಿದೆ.

ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಈ ಯೋಜನೆಯ ಜಾರಿಯಿಂದಾಗುವ ಸಂಭವನೀಯ ಪರಿಣಾಮಗಳನ್ನು ತಿಳಿದುಕೊಳ್ಳೋದಕ್ಕೆ ಟಾಸ್ಕ್ ಫೋರ್ಸ್ ಒಂದನ್ನ ನೇಮಿಸಿದ್ದಾರೆ. ವೀಸಾ ನೀತಿ ಸಡಿಲಿಕೆಯಿಂದ ಪ್ರವಾಸಿಗರಿಗೆ ಏನೆಲ್ಲಾ ಅನುಕೂಲಗಳಾಗಲಿವೆ ಅನ್ನೋದನ್ನು ಕೂಡ ಈ ತಂಡ ಅಧ್ಯಯನ ಮಾಡಲಿದೆ.

ಭಾರತ, ಚೀನಾ ಸೇರಿದಂತೆ ಅನೇಕ ಯುರೋಪಿಯನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ವೀಸಾ ವಿನಾಯಿತಿಯ ಪ್ರಯೋಜನ ದೊರೆಯಲಿದೆ. ಟಾಸ್ಕ್ ಫೋರ್ಸ್ ಅಧ್ಯಯನದ ವರದಿಯ ಪ್ರಕಾರ ಪ್ರಸಕ್ತ ವರ್ಷದ ಅಕ್ಟೋಬರ್ನಿಂದ ನವೆಂಬರ್ ತಿಂಗಳಿನಲ್ಲಿ ಮತ್ತು ಮಾರ್ಚ್ನಿಂದ ಏಪ್ರಿಲ್ ಅವಧಿಯಲ್ಲಿ ಪ್ರಾಯೋಗಿಕ ಈ ಯೋಜನೆಯನ್ನ ಜಾರಿಗೊಳಿಸಿದ ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗುತ್ತದೆಯಂತೆ. ಶ್ರೀಲಂಕಾ ಪ್ರವಾಸೋದ್ಯಮ ಇಲಾಖೆ ನಷ್ಟದ ಪರಿಸ್ಥಿತಿ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಹೀಗೊಂದು ಮಹತ್ವದ ನಿರ್ಧಾರ ಜಾರಿಗೊಳಿಸೋಕೆ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...