alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆಯಲು ಹೋಗಿ ದುರಂತ ಸಾವು ಕಂಡ ವಿದ್ಯಾರ್ಥಿ

ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಸೆಲ್ಫಿ ದುಬಾರಿಯಾಗಿ ಪರಿಗಣಿಸಿದೆ. ಸಮುದ್ರ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. 20 ವರ್ಷದ ಅಂಕಿತ್ ಪಶ್ಚಿಮ ಆಸ್ಟ್ರೇಲಿಯಾದ ಸಮುದ್ರ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆ ವೇಳೆ ಕಾಲು ಜಾರಿ ನೀರು ಪಾಲಾಗಿದ್ದಾನೆ.

ಅಂಕಿತ್ 40 ಮೀಟರ್ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಪರ್ತ್ ನಲ್ಲಿ ಓದುತ್ತಿರುವ ಅಂಕಿತ್ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದ ಎನ್ನಲಾಗಿದೆ. ಅಂಕಿತ್ 40 ಮೀಟರ್ ಎತ್ತರದ ಪರ್ವತದ ಮೇಲೆ ಸಾಹಸ ಮಾಡಲು ಹೋಗಿದ್ದಾನೆ. ತುತ್ತ ತುದಿಯಲ್ಲಿ ನಿಂತು ಫೋಟೋ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು ಸ್ನೇಹಿತರು ಹೇಳಿದ್ದಾರೆ.

ಘಟನೆ ನಡೆದ ಒಂದು ಗಂಟೆ ನಂತ್ರ ರಕ್ಷಣಾ ಪಡೆ ಸಮುದ್ರದಿಂದ ಅಂಕಿತ್ ಶವವನ್ನು ತೆಗೆದಿದೆ. ಅಂಕಿತ್ ಫೋಟೋ ತೆಗೆಯುವ ವೇಳೆ ತುಂಬಾ ಎಚ್ಚರಿಕೆಯಿಂದಿದ್ದ. ಅಚಾನಕ್ ಕಾಲು ಜಾರಿದೆ ಎಂದು ಸ್ನೇಹಿತರು ಹೇಳಿದ್ದಾರೆ. ಪೊಲೀಸರು ಅಂಕಿತ್ ಪಾಲಕರ ಸಂಪರ್ಕಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಈವರೆಗೂ ಅಂಕಿತ್ ಪಾಲಕರ ಸಂಪರ್ಕ ಸಿಕ್ಕಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...