alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೀಷ್ ಕಾಲುವೆ ಈಜಲು ಮುಂದಾಗಿದ್ದಾರೆ ಭಾರತೀಯ ಮೂಲದ ಮಹಿಳೆ

ಇಂಗ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳಾ ವಾಣಿಜ್ಯೋದ್ಯಮಿ ಲೇಹ್ ಚೌಧರಿ ಭಾರತದಲ್ಲಿ ನಡೆಯುತ್ತಿರೋ ಮಕ್ಕಳ ಕಳ್ಳಸಾಗಣೆ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಲೇಹ್ ಚೌಧರಿ ದಾಖಲೆಯ ಸಾಹಸ ಪ್ರದರ್ಶನಕ್ಕಾಗಿ ತಾಲೀಮು ನಡೆಸಿದ್ದಾರೆ. ಮಕ್ಕಳ ಕಳ್ಳಸಾಗಣೆ ವಿರುದ್ಧ ಜಾಗೃತಿ ಮೂಡಿಸೋ ಸಲುವಾಗಿ ಇಂಗ್ಲೀಷ್ ಕಡಲುಗಾಲುವೆಯನ್ನ ಈಜುವ ಸಾಹಸಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಕಳೆದ ಆರು ತಿಂಗಳಿನಿಂದ ಲೇಹ್ ಚೌಧರಿ ಭಾರೀ ತಯಾರಿ ನಡೆಸಿದ್ದಾರೆ. ಇಂಗ್ಲೆಂಡ್ನಲ್ಲಿ ಮಕ್ಕಳ ವೃತ್ತಿಪರ ಕಾಳಜಿ ಕೇಂದ್ರವಾದ ಪಾಪ್ ಅಪ್ ಅನ್ನೋ ಸಾಮಾಜಿಕ ಸಂಸ್ಥೆಯನ್ನ ಅವರು ನಡೆಸ್ತಿದ್ದಾರೆ. ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅವರು ಹೋರಾಡ್ತಿದ್ದಾರೆ. ಈಗಾಗ್ಲೇ ಅವರು 35ಸಾವಿರ ಪೌಂಡ್ಸ್ ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದಾರೆ.

ಫೆಬ್ರವರಿಯಲ್ಲಿ ಲೇಹ್ ಚೌಧರಿ ಭಾರತಕ್ಕೆ ಬಂದಿದ್ದ ಸಂದರ್ಭದಲ್ಲಿ ದೆಹಲಿಯ ಎನ್ಜಿಓ ಒಂದರಿಂದ ಸಾಕಷ್ಟು ಮಾಹಿತಿಯನ್ನ ಕಲೆ ಹಾಕಿದ್ದರು. ಮಕ್ಕಳ ಶಿಕ್ಷಣ, ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ಬಗ್ಗೆ ಬೇಸರಗೊಂಡಿದ್ದರು. ಆನಂತರದಲ್ಲಿ ಎರಡು ಸರ್ಕಾರೇತರ ಸಂಸ್ಥೆಗಳ ಜೊತೆಗೆ ಟೈಯಪ್ ಮಾಡಿಕೊಂಡಿದ್ದರು.
ಈಗ ದೇಣಿಗೆ ರೂಪದಲ್ಲಿ ಸಂಗ್ರಹಿಸಿರುವ ಮತ್ತು ಇಂಗ್ಲೀಷ್ ಕಡಲುಗಾಲುವೆಯನ್ನ ಈಜುವುದರಿಂದ ಸಿಗುವ ಹಣವನ್ನು ದೆಹಲಿಯಲ್ಲಿರುವ ಮಕ್ಕಳ ಎನ್ಜಿಓ ಸಂಸ್ಥೆಗೆ ನೀಡಲು ಮುಂದಾಗಿದ್ದಾರೆ. ಇದರ ಮೂಲಕ 1800 ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಲಿದ್ದಾರೆ ಲೇಹ್ ಚೌಧರಿ.

ಈ ಸಾಮಾಜಿಕ ಕಾರ್ಯದ ಜೊತೆಗೆ ಲೇಹ್ ಚೌಧರಿ ದಾಖಲೆಯೊಂದನ್ನ ಬರೆಯೋಕೆ ಸಿದ್ಧತೆ ನಡೆಸಿದ್ದಾರೆ. ಇಂಗ್ಲೀಷ್ ಕಡಲುಗಾಲುವೆಯನ್ನು ಈಜಿದ 1500ನೇ ವ್ಯಕ್ತಿಯಾಗಲಿದ್ದಾರೆ ಲೇಹ್ ಚೌಧರಿ. 35 ಕಿಮೀ ಅಂತರವನ್ನು ಅವರು ಕ್ರಮಿಸೋಕೆ ನಿರ್ಧರಿಸಿದ್ದಾರೆ. ಭಾರತೀಯ ಸಂಜಾತೆಯ ಈ ಕಾರ್ಯಕ್ಕೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...