alex Certify
ಕನ್ನಡ ದುನಿಯಾ       Mobile App
       

Kannada Duniya

ನೆರೆಪೀಡಿತ ಕೇರಳಕ್ಕೆ ಅನಿವಾಸಿ ಭಾರತೀಯರ ಸಹಾಯಹಸ್ತ

ಕೇರಳದಲ್ಲಿ ಪ್ರವಾಹ….ಜನರ ಹಾಹಾಕಾರ….ದೇಶದ ಜನರ ಮನ ಕುಲುಕಿದೆ. ಇಷ್ಟೇ ಏಕೆ ಬೇರೆ ದೇಶಗಳು ಸಹ ಕೇರಳಕ್ಕೆ ಸಹಾಯ ನೀಡಲು ಸಿದ್ಧ ಎಂದು ತಿಳಿಸಿವೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಗಳು ಕೇರಳದ ಪ್ರವಾಹ ಪೀಡಿತ ಸ್ಥಳಕ್ಕೆ ಸುಮಾರು 12.5 ಕೋಟಿ ರೂಪಾಯಿ ನೀಡಿದ್ದಾರೆ.

ಕೇರಳದಲ್ಲಿ ಮಳೆಯ ಅಟ್ಟಹಾಸಕ್ಕೆ 164 ಮಂದಿ ಸಾವನ್ನಪ್ಪಿದ್ದು, ಸುಮಾರು 3.14 ಲಕ್ಷ ಜನ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 100 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಮಳೆ ಈ ಬಾರಿ ದೇವರ ನಾಡಿನಲ್ಲಿ ಸುರಿದಿದೆ. 80 ಡ್ಯಾಮ್ ಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ.

ಲುಲು ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇರಳ ಮೂಲದ ಯೂಸುಫ್ ಅಲಿ, ಮಳೆಯಿಂದ ಹಾನಿಗೊಳಗಾದ ಕೇರಳಕ್ಕೆ 5 ಕೋಟಿ ನೀಡಿದ್ದಾರೆ. ಫಾತಿಮಾ ಹೆಲ್ತ್ ಕೇರ್ ಅಧ್ಯಕ್ಷ ಕೆ.ಪಿ. ಹುಸೇನ್ ಸಹ 5 ಕೋಟಿ ನೆರವು ನೀಡಿದ್ದಾರೆ. ಇದ್ರಲ್ಲಿ 1 ಕೋಟಿಯನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದು, ಉಳಿದ ಹಣವನ್ನು ವೈದ್ಯಕೀಯ ಸವಲತ್ತುಗಳಿಗೆ ಬಳಸುವಂತೆ ತಿಳಿಸಿದ್ದಾರೆ. ಹುಸೇನ್, ಕೇರಳ ರಾಜ್ಯ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ತಮ್ಮ ಆಸ್ಪತ್ರೆಯ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ಕಳುಹಿಸೋದಾಗಿ ತಿಳಿಸಿದ್ದಾರೆ.

ದುಬೈನಲ್ಲಿ ನೆಲೆಸಿರುವ ಉದ್ಯಮಿ ಬಿ.ಆರ್. ಶೆಟ್ಟಿ 2 ಕೋಟಿ, ಆಜಾದ್ ಮೊಪೇನ್ 5 ಕೋಟಿ ನೆರವು ಘೋಷಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ 300 ವೈದ್ಯಕೀಯ ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...