alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪನನ್ನೇ ಉಡಾಯಿಸಲು ಸಂಚು ರೂಪಿಸಿದ್ದವನ ಕಥೆ ಏನಾಯ್ತು ಗೊತ್ತಾ?

ಲಂಡನ್ ನಲ್ಲಿ ಭಾರತೀಯ ಮೂಲದ ಯುವಕನಿಗೆ 12 ವರ್ಷ ಜೈಲುಶಿಕ್ಷೆಯಾಗಿದೆ. ಈತ ತನ್ನ ತಂದೆಯನ್ನು ಹತ್ಯೆ ಮಾಡಲು ಆನ್ ಲೈನ್ ನಲ್ಲಿ ಸ್ಫೋಟಕ ಖರೀದಿಸಲು ಯತ್ನಿಸಿದ್ದ. ಆರೋಪಿ ಗುರ್ತೇಜ್ ಸಿಂಗ್ ರಾಂಧಾವಾನನ್ನು ಕಳೆದ ವರ್ಷ ಮೇನಲ್ಲಿ ಬಂಧಿಸಲಾಗಿತ್ತು.

ಗುರ್ತೇಜ್ ಲಂಡನ್ ನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅದಕ್ಕೆ ಹೆತ್ತವರ ಸಮ್ಮತಿ ಇರಲಿಲ್ಲ. ತಂದೆ-ತಾಯಿ ಇಬ್ಬರೂ ಆಕೆಯನ್ನು ವಿವಾಹವಾಗದಂತೆ ಸೂಚಿಸಿದ್ದರು. ಇದರಿಂದ ಬೇಸರಗೊಂಡಿದ್ದ ಗುರ್ತೇಜ್ ತಂದೆಯನ್ನೇ ಕೊಲ್ಲಲು ಸ್ಕೆಚ್ ಹಾಕಿದ್ದ.

ಆನ್ ಲೈನ್ ನಲ್ಲಿ ಸ್ಫೋಟಕಗಳನ್ನು ಆರ್ಡರ್ ಮಾಡಿ, ಅದನ್ನು ಡೆಲಿವರಿ ಮಾಡಲು ಬೇರೆ ವಿಳಾಸ ಕೊಟ್ಟಿದ್ದ. Vehicle Borne Improvised Explosive Device ಎಂಬುದು ಅದರ ಹೆಸರು. ವಿಷಯ ಗೊತ್ತಾಗ್ತಿದ್ದಂತೆ ಲಂಡನ್ ನ ಕ್ರೈಂ ಬ್ರಾಂಚ್ ಪೊಲೀಸರು ಆ ಸ್ಫೋಟಕದ ಬದಲು ಡಮ್ಮಿ ಪೀಸ್ ಇಟ್ಟು ಕಳಿಸಿದ್ದಾರೆ.

ಪೊಲೀಸರಿಗೆ ವಿಷಯ ತಿಳಿಯದೇ ಗುರ್ತೇಜ್ ಆ ಸ್ಫೋಟಕವನ್ನು ಬಳಸಿದ್ದೇ ಆದಲ್ಲಿ ಹಲವು ಅಮಾಯಕರ ಪ್ರಾಣ ಹೋಗುವ ಸಾಧ್ಯತೆ ಇತ್ತು. ಜೊತೆಗೆ 19ರ ಹರೆಯದಲ್ಲೇ ಆತ ಇಂತಹ ವಿದ್ರೋಹಕಾರಿ ಕೃತ್ಯಕ್ಕೆ ಕೈಹಾಕಿರೋದು ಅಚ್ಚರಿ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...