alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಗೆ ಲವ್ ಲೆಟರ್ ಕೊಟ್ಟ ವೈದ್ಯನಿಗೆ ಪೀಕಲಾಟ

dr

ಲಂಡನ್ ನಲ್ಲಿ ಮಹಿಳಾ ರೋಗಿಯೊಬ್ಬಳಿಗೆ ಪ್ರೇಮ ಪತ್ರ ಬರೆಯುವ ಮೂಲಕ ವೃತ್ತಿಧರ್ಮಕ್ಕೆ ಧಕ್ಕೆ ತಂದ ಭಾರತೀಯ ಮೂಲದ ವೈದ್ಯನಿಗೆ ನಿಷೇಧ ಹೇರಲಾಗಿದೆ. ಡಾ.ಸಚಿಯೇಂದ್ರ ಅಮರಗಿರಿ ಇನ್ಮುಂದೆ ಲಂಡನ್ ನಲ್ಲಿ ಕರ್ತವ್ಯ ನಿರ್ವಹಿಸುವಂತಿಲ್ಲ. 59 ವರ್ಷದ ಸಚಿಯೇಂದ್ರ ಹೊಟ್ಟೆ ನೋವು ಅಂತ ಬಂದಿದ್ದ ಮಹಿಳೆಯೊಬ್ಬಳಿಗೆ ಚಿಕಿತ್ಸೆ ನೀಡಿದ್ರು.

ಆಕೆಯ ಮೇಲೆ ಅವರಿಗೆ ಒಲವು ಮೂಡಿತ್ತು, ಬಳಿಕ ಅವಳಿಗೆ ಲವ್ ಲೆಟರ್ ಒಂದನ್ನು ಬರೆದಿದ್ರು. ‘ನೀನು ಮೊದಲ ಬಾರಿ ನನ್ನ ಕ್ಲಿನಿಕ್ ಗೆ ಬಂದಾಗ ನಾನು ಬೆರಗಾಗಿದ್ದೆ, ನಿನ್ನ ಉಪಸ್ಥಿತಿಯಿಂದ ನನಗಾದ ಆನಂದ ಅಷ್ಟಿಷ್ಟಲ್ಲ’ ಅಂತೆಲ್ಲಾ ಪತ್ರದಲ್ಲಿ ಬರೆದಿದ್ರು. ಜೊತೆಯಾಗಿ ಕಾಫಿ ಕುಡಿಯೋಣ ಬಾ ಅಂತಾ ಕರೆದಿದ್ರು.

ಪತ್ರ ಕೈಗೆ ಸಿಗ್ತಿದ್ದಂತೆ ಮಹಿಳೆ ಪೊಲೀಸರನ್ನು ಕರೆಸಿದ್ದಾಳೆ. ಆಕೆಯ ಮನೆ, ಅಡ್ರೆಸ್ ಫೋನ್ ನಂಬರ್ ಎಲ್ಲಾ ವಿವರವೂ ಡಾ.ಸಚಿಯೇಂದ್ರಗೆ ಗೊತ್ತಿತ್ತು. ವೈದ್ಯರು ಅತಿರೇಕದ ವರ್ತನೆ ತೋರಿದ್ದಾರೆ ಅಂತಾ ಕೋರ್ಟ್ ಕೂಡ ಅಭಿಪ್ರಾಯಪಟ್ಟಿದೆ. ಆ ಕ್ಷಣಕ್ಕೆ ನನ್ನಲ್ಲಿ ಬಂದಿದ್ದ ಹುಚ್ಚುತನ ಅದು ಅಂತಾ ಡಾ.ಸಚಿಯೇಂದ್ರ ಕೋರ್ಟ್ ಗೆ ತಿಳಿಸಿದ್ದಾರೆ. ನಾನು ಪತ್ರ ಬರೆದಿದ್ದು ನಿಜ, ಆದ್ರೆ ಅದರಲ್ಲಿದ್ದಿದ್ದು ನನ್ನ ನಿಜವಾದ ಭಾವನೆ. ಅದನ್ನು ತುಚ್ಛವಾಗಿ ಕಾಣಬೇಡಿ ಅಂತಾನೂ ಮನವಿ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...