alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಮೂಲದ ವ್ಯಕ್ತಿಗೆ ಆಸ್ಟ್ರೇಲಿಯಾದ ಮಾಸ್ಟರ್ ಶೆಫ್ 10ನೇ ಆವೃತ್ತಿ ಪ್ರಶಸ್ತಿ

ಭಾರತದ ತಮಿಳುನಾಡಿನ ಕೊಯಂಬತ್ತೂರು ಮೂಲದ ಶಶಿ ಚೆಲ್ಲೈ ಆಸ್ಟ್ರೇಲಿಯಾದಲ್ಲಿ ನಡೆದ 10 ಆವೃತ್ತಿಯ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯಾದ ಎರಡು ಲಕ್ಷದ ಐವತ್ತು ಸಾವಿರ ಡಾಲರ್ ಗಳಷ್ಟು ಹಣವನ್ನು ಅಂದ್ರೆ 1 ಕೋಟಿ 26 ಲಕ್ಷ ರೂಪಾಯಿ ಹಣವನ್ನು ಬಹುಮಾನದ ರೂಪದಲ್ಲಿ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಶಶಿ ಚೆಲ್ಲೈ ಆರು ವರ್ಷಗಳಿಂದ ಜೈಲು ನಿರೀಕ್ಷಣಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ದಾರೆ. ಅದಕ್ಕೂ ಮೊದಲು ಸಿಂಗಾಪುರ್ ನಲ್ಲಿ 12 ವರ್ಷಗಳ ಕಾಲ ಅವರು ಪೊಲೀಸ್ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು.

ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಅವರು ತಮ್ಮ ಪ್ರತಿಸ್ಙರ್ಧಿಯ ವಿರುದ್ಧ ಗಳಿಸಿದ್ದು 100 ಕ್ಕೆ 93 ಅಂಕ. ಈ ಮೂಲಕ ಮಾಸ್ಟರ್ ಶೆಫ್ ಸರಣಿಯ 10ನೇ ಟೈಟಲ್ ಮತ್ತು ನಗದು ಬಹುಮಾನ ಶಶಿ ಚೆಲ್ಲೈ ಅವರ ಪಾಲಾಗಿದೆ. ಅಂತಿಮ ಸುತ್ತಿನಲ್ಲಿ ಅವರು ಸಂಬಾಲ್ ಪರ್ವಾನ್ಸ್, ಫಿಶ್ ಕರಿ, ಜೀರಿಗೆ ಅನ್ನದ ನಳಪಾಕವನ್ನು ತಯಾರು ಮಾಡಿದ್ದರು. ತಮ್ಮನ್ನ ಈ ಸೀಸನ್ ನಲ್ಲಿ ಬೆಂಬಲಿಸಿದ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...