alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಭೇಟಿಯಾಗಲು ಭಾರತೀಯ ಯುವಕ ಖರ್ಚು ಮಾಡಿದ್ದೆಷ್ಟು ಗೊತ್ತಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರುಗಳ ಐತಿಹಾಸಿಕ ಭೇಟಿಗೆ ಸಿಂಗಾಪುರ್ ಸಾಕ್ಷಿಯಾಗಿದೆ. ಉಭಯ ನಾಯಕರು, ಮಾತುಕತೆ ಬಳಿಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದು ಜಾಗತಿಕ ಮಟ್ಟದಲ್ಲೂ ಪ್ರಭಾವ ಬೀರಲಿದೆ.

ಟ್ರಂಪ್ ಹಾಗೂ ಕಿಮ್ ಭೇಟಿ ಸಂದರ್ಭದಲ್ಲಿ ಅವರು ತಂಗಿದ್ದ ಹೊಟೇಲ್ ಗೆ ಭಾರಿ ಭದ್ರತೆ ಒದಗಿಸಲಾಗಿತ್ತು. ಆದರೂ ಭಾರತೀಯ ಯುವಕನೊಬ್ಬ ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾಗಬೇಕೆಂದು ಉಪಾಯವೊಂದನ್ನು ಮಾಡಿದ್ದು, ಆದರೆ ಅದು ವ್ಯರ್ಥವಾಗಿದೆ.

ಮಲೇಶಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾರಾಜ್ ಮೋಹನ್ ಎಂಬ 25 ವರ್ಷದ ಯುವಕ, ಟ್ರಂಪ್ ಭೇಟಿಗಾಗಿ ಅವರು ತಂಗಿದ್ದ ಸಿಂಗಾಪುರದ ಶಾಂಗ್ರಿಲಾ ಹೋಟೆಲ್ ನಲ್ಲಿ ರೂಮ್ ಮಾಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 38,600 ರೂ. ವೆಚ್ಚ ಮಾಡಿದ್ದಾರೆ.

ಸೋಮವಾರ ರಾತ್ರಿ ಟ್ರಂಪ್ ಬರುವಿಕೆಗಾಗಿ ಮಹಾರಾಜ್ ಮೋಹನ್ ಸುಮಾರು ಐದು ತಾಸು ಹೊಟೇಲ್ ಲಾಬಿಯಲ್ಲಿ ಕುಳಿತಿದ್ದರೂ ಪ್ರಯೋಜನವಾಗಿಲ್ಲ. ಮಾರನೇ ದಿನ ಮತ್ತೆ ಬೆಳಗ್ಗೆ 6-30 ಕ್ಕೆ ಕಾದು ಕುಳಿತಿದ್ದು, ಎಂಟು ಗಂಟೆ ಸುಮಾರಿಗೆ ಹೊರಬಂದ ಟ್ರಂಪ್ ರನ್ನು ದೂರದಿಂದ ನೋಡಲಷ್ಟೇ ಸಾಧ್ಯವಾಗಿದೆ. ಕಡೆಗೆ ಅಮೆರಿಕಾ ಅಧ್ಯಕ್ಷರ ದೈತ್ಯ ಕಾರು ಬೀಸ್ಟ್ ಜೊತೆಗೆ ಸೆಲ್ಫಿ ತೆಗೆದುಕೊಂಡು ಮಹಾರಾಜ್ ಮೋಹನ್ ಸಮಾಧಾನ ಪಟ್ಟುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...