alex Certify
ಕನ್ನಡ ದುನಿಯಾ       Mobile App
       

Kannada Duniya

26 ವರ್ಷ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದವನ ಅರೆಸ್ಟ್

arrest-1

ಭಾರತೀಯ ಮೂಲದ 63 ವರ್ಷದ ವ್ಯಕ್ತಿಯೊಬ್ಬನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಈತ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯೂಜೆರ್ಸಿಯ ಜೈಪಾಲ್ ಮಹಾರಾಜ್ ಬಂಧಿತ ಆರೋಪಿ. ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದ ಜೈಪಾಲ್, ಅಪಘಾತವೊಂದಕ್ಕೆ ಕಾರಣನಾಗಿದ್ದ. ಆ ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಳು.

1989 ರ ಡಿಸೆಂಬರ್ ನಲ್ಲಿ ಈತನನ್ನು ಬಂಧಿಸಲಾಗಿತ್ತು. ಆಗ ಜೈಪಾಲ್ ಗೆ 36 ವರ್ಷ. ಜೈಲಿನಿಂದ ತಪ್ಪಿಸಿಕೊಂಡಿದ್ದ ಈತ ವಿಚಾರಣೆಗೂ ಹಾಜರಾಗಿರಲಿಲ್ಲ. 1990ರಲ್ಲಿ ಇವನಿಗೆ 4 ರಿಂದ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದ್ರೆ ಜೈಪಾಲ್ ಮಾತ್ರ ಪೊಲೀಸರಿಂದ ತಪ್ಪಿಸಿಕೊಂಡಿದ್ದ.

26 ವರ್ಷಗಳ ಕಾಲ ಪೊಲೀಸರಿಗೆ ಆತನ ಸುಳಿವೇ ಸಿಕ್ಕಿರಲಿಲ್ಲ. ಈಗ ಆತನನ್ನು ಬಂಧಿಸಿ ಕ್ವೀನ್ಸ್ ಸುಪ್ರೀಂ ಕೋರ್ಟ್ ಜಸ್ಟಿಸ್ ರಾಬರ್ಟ್ ಕೋಮ್ ಅವರ ಎದುರು ಹಾಜರುಪಡಿಸಲಾಗಿದೆ. ಆತನಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ಆರಂಭವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...