alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟು ಕೊಡದ್ದಕ್ಕೆ ಬಾಲಕ ಮಾಡಿದ್ದೇನು…?

ಆಟವಾಡುವ ಹುಡುಗರ ಕೈಗಳಲ್ಲಿ ಪಿಸ್ತೂಲು ಸಿಕ್ಕರೆ ಏನಾಗುತ್ತೆ ಎಂಬುದನ್ನು ಊಹಿಸುವುದೂ ಕಷ್ಟ. ಹದಿಹರೆಯದಲ್ಲಿ ಮಕ್ಕಳು ಜ್ಞಾನ ಸಂಪಾದನೆಯತ್ತ ಹೆಚ್ಚು ಗಮನ ನೀಡಬೇಕು. ಹೀಗಾಗದೇ ಇದ್ದಲ್ಲಿ, ಮಕ್ಕಳು ಕೆಲ ಕೆಟ್ಟ ಚಟಗಳಿಗೆ ಬಲಿಯಾಗುವ ಅಪಾಯ ಹೆಚ್ಚು. ಈ ರೀತಿಯ ಕೆಟ್ಟ ಚಟಕ್ಕೆ ಒಗ್ಗಿಕೊಂಡಲ್ಲಿ, ಮಕ್ಕಳು ಕೊಲೆ ಮಾಡಲೂ ಹಿಂಜರಿಯುವುದಿಲ್ಲ.

ಲಂಡನ್‌ನಲ್ಲಿ ಸಿಗರೇಟ್‌ ಕೊಡುವುದಿಲ್ಲ ಎಂದು ಹೇಳಿದ ಭಾರತೀಯ ಮೂಲದ ಅಂಗಡಿಯವನ ತಲೆಗೆ 16 ವರ್ಷದ ಹುಡುಗ ಗುಂಡಿಕ್ಕಿದ್ದಾನೆ. ಕೋರ್ಟ್‌ ಇದೀಗ ಹುಡುಗನಿಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.  ಜನವರಿಯಲ್ಲಿ ಮಿಲ್‌ಹಿಲ್‌ನಲ್ಲಿ ವಿಜಯ್‌ ಕುಮಾರ್‌ ಪಟೇಲ್‌ ಎಂಬಾತನಿಗೆ 16 ವರ್ಷದ ಅಪ್ರಾಪ್ತ ಗುಂಡು ಹಾರಿಸಿದ್ದಾನೆ. 18 ವರ್ಷದ ಕೆಳಗಿನವನಾದ ಕಾರಣ ಸಿಗರೇಟು ನೀಡುವುದಿಲ್ಲ ಎಂದು ವಿಜಯ್‌ ಕುಮಾರ್‌ ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಹುಡುಗ ಗುಂಡು ಹಾರಿಸಿದ್ದಾನೆ.

ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೇಳಿರುವ ಕೋರ್ಟ್‌, 4 ವರ್ಷ ಸಜೆ ಹಾಗೂ ಮುಂದಿನ 3 ವರ್ಷ ಬಾಲಕನ ಮೇಲೆ ನಿಗಾ ಇರಿಸಲು ಸೂಚನೆ ನೀಡಿದೆ. ಘಟನೆಗೆ ಮುನ್ನ ಹುಡುಗ ಅತಿಯಾದ ಮದ್ಯ ಸೇವಿಸಿದ್ದ. ಸಿಗರೇಟ್‌ ನೀಡದೇ ಇದ್ದ ವಿಜಯ್‌ ಕುಮಾರ್‌ ಮೇಲೆ ಕೋಪಗೊಂಡಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬಳಿಕ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ವಿಜಯ್‌ ಕುಮಾರ್‌ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅವರು ಬದುಕುಳಿದಿಲ್ಲ. ಆರಂಭದಲ್ಲಿ ಬಾಲಕ ಸ್ವಯಂ ರಕ್ಷಣೆ ಎಂದು ವಾದಿಸಿದರೂ, ವಿಚಾರಣೆ ಕೊನೆಯಲ್ಲಿ ಕೊಲೆಗಾರನಾಗಿ ನಿರೂಪಿಸಲ್ಪಟ್ಟಿದ್ದಾನೆ. ವಿಜಯ್‌ ಕುಮಾರ್‌ ನಿನ್ನ ಎದುರು ಯಾವುದೇ ರಕ್ಷಣೆ ತೆಗೆದುಕೊಳ್ಳದ ಪರಿಸ್ಥಿತಿಯಲ್ಲಿದ್ದರು. ನೀನು ಅವರನ್ನು ಕೊಲೆಗೈದಿದ್ದೀಯ ಎಂದು ಕೋರ್ಟ್‌ ಬಾಲಕನನ್ನು ತರಾಟೆಗೆ ತೆಗೆದುಕೊಂಡಿತ್ತು. ಬಾಲಕ ಮಾದಕ ದ್ರವ್ಯಗಳ ಬಳಕೆ ಮಾಡುತ್ತಿದ್ದ. ಅಲ್ಲದೆ ಮಾನಸಿಕವಾಗಿಯೂ ಅಸ್ವಸ್ಧನಾಗಿದ್ದ ಎಂದು ಕೋರ್ಟ್‌ಗೆ ತಿಳಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...