alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಮೂಲದ ವಿದ್ಯಾರ್ಥಿಗೆ 27 ವರ್ಷ ಜೈಲು

ಉನ್ನತ ಶಿಕ್ಷಣ ಪಡೆಯಲು ಅಮೆರಿಕಾಗೆ ತೆರಳಿದ್ದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಭಯೋತ್ಪಾದಕ ಸಂಘಟನೆ ಅಲ್ ಖೈದಾಕ್ಕೆ ಹಣ ಸಹಾಯ ಮಾಡಿದ ಆರೋಪದ ಮೇಲೆ 27.5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಶಿಕ್ಷೆ ಅವಧಿ ಬಳಿಕ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

39 ವರ್ಷದ ಯಾಹ್ಯಾ ಫಾರೂಕ್ ಆಹ್ಮದ್ ಶಿಕ್ಷೆಗೊಳಗಾದವನಾಗಿದ್ದು, 2015 ರಲ್ಲಿ ಈತನ ಸಹೋದರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. 2002 ರಲ್ಲಿ ಓಹಿಯೋ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಪಡೆಯಲು ದಾಖಲಾಗಿದ್ದ ಯಾಹ್ಯಾ ಫಾರೂಕ್, 2008 ರಲ್ಲಿ ಅಮೆರಿಕಾ ಯುವತಿಯನ್ನು ವಿವಾಹವಾಗಿದ್ದ.

ಅಲ್ ಖೈದಾ ಸಂಘಟನೆ ಕುರಿತು ಸಹಾನುಭೂತಿ ಹೊಂದಿದ್ದ ಯಾಹ್ಯಾ ಫಾರೂಕ್ ಮತ್ತಾತನ ಸ್ನೇಹಿತರು 2009 ರಲ್ಲಿ ಯಮೆನ್ ಗೆ ತೆರಳಿ ಅಲ್ ಖೈದಾ ಸಂಘಟನೆಯ ಅನ್ವರ್ ಅಲ್ ಅವ್ಲಾಕಿ ಎಂಬಾತನಿಗೆ 22 ಸಾವಿರ ಅಮೆರಿಕನ್ ಡಾಲರ್ ತಲುಪಿಸಿದ್ದರು. ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಅಮೆರಿಕಾ ಪೊಲೀಸರು 2015 ರಲ್ಲಿ ಬಂಧಿಸಿದ್ದರು. ಜೈಲಿನಲ್ಲಿದ್ದ ಸಂದರ್ಭದಲ್ಲೂ ಯಾಹ್ಯಾ ಫಾರೂಕ್, ತನ್ನ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರನ್ನು ಅಪಹರಿಸಿ ಹತ್ಯೆ ಮಾಡಲು ವ್ಯಕ್ತಿಯೊಬ್ಬನಿಗೆ 15 ಸಾವಿರ ಡಾಲರ್ ನೀಡುವ ಡೀಲ್ ನೀಡಿದ್ದನೆನ್ನಲಾಗಿದೆ. ಯಾಹ್ಯಾ ಸಂಪರ್ಕಿಸಿದ್ದ ವ್ಯಕ್ತಿ ಎಫ್.ಬಿ.ಐ. ಅಂಡರ್ ಕವರ್ ಏಜೆಂಟ್ ಆಗಿದ್ದು, ಈ ಎಲ್ಲ ಪ್ರಕರಣಗಳಲ್ಲಿ ಯಾಹ್ಯಾ ಫಾರೂಕ್ ಗೆ 27.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...