alex Certify
ಕನ್ನಡ ದುನಿಯಾ       Mobile App
       

Kannada Duniya

ಅನಿವಾಸಿ ಭಾರತೀಯ ಯುವಕನಿಗೆ 13 ವರ್ಷ ಜೈಲು

ಲಂಡನ್ ನಲ್ಲಿ ಕುಡಿದು ವಾಹನ ಚಲಾಯಿಸಿ ಮೂವರು ಬಾಲಕರ ಸಾವಿಗೆ ಕಾರಣನಾದ ಭಾರತೀಯ ಮೂಲದ ವ್ಯಕ್ತಿಗೆ 13  ವರ್ಷಗಳ ಜೈಲು ಶಿಕ್ಷೆಯಾಗಿದೆ. ಆದ್ರೆ ಈ ತೀರ್ಪಿನ ಬಗ್ಗೆ ಮೃತರ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೈನೇಶ್ ಚುಡಾಸಮಾ ಎಂಬ 28 ವರ್ಷದ ಯುವಕ ಜನವರಿ 26ರಂದು ಬರ್ತಡೇ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ. ಕುಡಿದ ಅಮಲಲ್ಲಿ ಕಾರು ಚಲಾಯಿಸಿದ ಜೈನೇಶ್ ಲಂಡನ್ ನ ಹೇಯ್ಸ್ ನಲ್ಲಿ ಅಪಘಾತ ಮಾಡಿದ್ದಾನೆ. ಪಾದಚಾರಿಗಳ ಮೇಲೆ ಕಾರು ಹರಿಸಿದ್ದಾನೆ.

ಈ ಅಪಘಾತದಲ್ಲಿ 17 ವರ್ಷದ ಹ್ಯಾರಿ ರೈಸ್, 16 ವರ್ಷದ ಮ್ಯಾಕ್ ಗಿನ್ನೆಸ್, ಹಾಗೂ 17 ವರ್ಷದ ಜಾರ್ಜ್ ವಿಲ್ಕಿನ್ಸನ್ ಮೃತಪಟ್ಟಿದ್ದರು. ಈ ಪ್ರಕರಣದ ಅಪರಾಧಿ ಜೈನೇಶ್ ಇನ್ನು 13.5 ವರ್ಷಗಳ ಕಾಲ ವಾಹನ ಚಲಾಯಿಸುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...