alex Certify
ಕನ್ನಡ ದುನಿಯಾ       Mobile App
       

Kannada Duniya

ತಮಾಷೆ ಅತಿರೇಕಕ್ಕೆ ಹೋದಾಗ ನಡೀತು ದುರಂತ….

prank-dead

ಸ್ನೇಹಿತರ ತಮಾಷೆ ಆಟ ಬ್ರಿಟನ್ ನಲ್ಲಿ ನೆಲೆಸಿದ್ದ ಭಾರತೀಯನೊಬ್ಬನನ್ನು ಬಲಿ ಪಡೆದಿದೆ. ಮೃತ ನಿಶಾಂತನ್ ಒಬ್ಬ ಹಣಕಾಸು ತಜ್ಞ. ನಿಶಾಂತನ್ ತನ್ನ ಸ್ನೇಹಿತರಿಗಾಗಿ ಪೋರ್ಚುಗಲ್ ನಲ್ಲಿ ನದಿಯಲ್ಲೇ ಪಾರ್ಟಿ ಆಯೋಜಿಸಿದ್ದ. ಈ ವೇಳೆ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಕಳೆದ ಜುಲೈನಲ್ಲಿ ನಡೆದ ಘಟನೆ ಇದು. ನಿಶಾಂತನ್ ಸ್ನೇಹಿತನೊಬ್ಬನ ಮದುವೆ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.

ಸ್ನೇಹಿತರೆಲ್ಲ ದೋಣಿಯಲ್ಲಿ ಪಯಣಿಸುತ್ತಲೇ ಎಂಜಾಯ್ ಮಾಡುತ್ತಿದ್ರು. ಪರಸ್ಪರ ತಮಾಷೆ ಮಾಡಿಕೊಳ್ಳುತ್ತ ನಿಶಾಂತನ್ ನನ್ನು ತಳ್ಳಿದ್ದಾರೆ. ಆ ರಭಸಕ್ಕೆ ದೋಣಿಯ ತಂತಿ ತಲೆಗೆ ತಗುಲಿ ಆತ ನೀರಿಗೆ ಬಿದ್ದಿದ್ದಾನೆ. ಇದರಿಂದ ಆಘಾತಗೊಂಡ ನಿಶಾಂತನ್ ಗೆ ಈಜಲು ಕೂಡ ಸಾಧ್ಯವಾಗಿಲ್ಲ, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ನಿಶಾಂತನ್ ಗೆ 31 ವರ್ಷ ವಯಸ್ಸಾಗಿತ್ತು. ಒಟ್ಟು 13 ಗೆಳೆಯರು ಜೊತೆಯಾಗಿ ಯೌಸೆಫ್ ಇಸ್ಮಾಯಿಲ್ ಎಂಬಾತನ ಮದುವೆಯ ಸಂಭ್ರಮಾಚರಣೆಗೆ ಹೋಗಿದ್ದರು. ದುರ್ಘಟನೆ ನಡೆದು 6 ದಿನಗಳ ನಂತರ ನಿಶಾಂತನ್ ಮೃತದೇಹ ಪತ್ತೆಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...