alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಭಾರತೀಯನ ಹೇಯ ಕೃತ್ಯ

bidhya-das_650x400_51489974233

ಲಂಡನ್ ನಲ್ಲಿ ಒಂದು ವರ್ಷದ ಪುಟ್ಟ ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಿದ್ಯಾ ಸಾಗರ್ ದಾಸ್ ಬಂಧಿತ ಆರೋಪಿ. 33 ವರ್ಷದ ಈತ ಫಿನ್ಸ್ ಬರಿ ಪಾರ್ಕ್ ನಲ್ಲಿ ನೆಲೆಸಿದ್ದ. ಹೋಟೆಲ್ ಗಳಲ್ಲಿ ನೈಟ್ ಶಿಫ್ಟ್ ಕೆಲಸ ಮಾಡ್ತಾ ಇದ್ದ ಬಿದ್ದಾ ದಾಸ್, ಇತ್ತೀಚೆಗಷ್ಟೆ ಉದ್ಯೋಗ ತ್ಯಜಿಸಿದ್ದ.

ಶನಿವಾರ ರಾತ್ರಿ 11 ಗಂಟೆ ವೇಳೆಗೆ ಮೂವರು ಮಕ್ಕಳು ಹಾಗೂ ಮಹಿಳೆಯಿದ್ದ ಫ್ಲಾಟ್ ಗೆ ಬಿದ್ಯಾ ದಾಸ್ ನುಗ್ಗಿದ್ದ. 1 ವರ್ಷದ ಗಂಡು ಮಗು ಹಾಗೂ ಇಬ್ಬರು ಅವಳಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ದಿಢೀರ್ ದಾಳಿಯಿಂದ ಕಂಗಾಲಾದ ಮಹಿಳೆ ಕೂಗಿಕೊಳ್ಳುತ್ತ ಫ್ಲಾಟ್ ನಿಂದ ಹೊರಬಂದಿದ್ಲು.

ಅಕ್ಕಪಕ್ಕದವರೆಲ್ಲ ಮನೆಗೆ ಬಂದು ನೋಡುವಷ್ಟರಲ್ಲಿ ಮಕ್ಕಳೆಲ್ಲ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹ್ಯಾಮರ್ ನಿಂದ ಹೊಡೆದು ದುಷ್ಕರ್ಮಿ 1 ವರ್ಷದ ಮಗುವನ್ನು ಕೊಂದಿದ್ದ. ಇನ್ನಿಬ್ಬರು ಮಕ್ಕಳ ಮೇಲೂ ದಾಳಿ ಮಾಡಿದ್ದ. ಅವಳಿ ಮಕ್ಕಳ ಪೈಕಿ, ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಆರೋಪಿ ಬಿದ್ಯಾ ದಾಸ್ ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...