alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದು ವಾಹನ ಚಲಾಯಿಸಿ ದುಬಾರಿ ದಂಡ ತೆತ್ತ ಭಾರತೀಯ

ಸಿಂಗಾಪುರ: ಕುಡಿದು ವಾಹನ ಚಲಾಯಿಸಿದ ಭಾರತ ಮೂಲದ ಹಿರಿಯ ಸರಕಾರಿ ವಕೀಲ ಶಿಕ್ಷೆಗೆ ಗುರಿಯಾಗಿದ್ದಾರೆ.

ಪಬ್‌ನಲ್ಲಿ ಕಾಕ್ಟೇಲ್‌ ಕುಡಿದು ವಾಹನ ಚಲಾಯಿಸಿದ್ದಕ್ಕೆ, 80,396 ರೂ. ದಂಡ ಹಾಗೂ ಒಂದು ವರ್ಷಗಳ ಕಾಲ ಪರವಾನಗಿ ನಿಷೇಧಿಸಿ, ಕೋರ್ಟ್‌ ಆದೇಶಿಸಿದೆ. ಇದು ಮೊದಲ ಬಾರಿ ತಪ್ಪು ನಡೆದಿರುವ ಹಿನ್ನೆಲೆಯಲ್ಲಿ ಅತ್ಯಂತ ಕಡಿಮೆ ಶಿಕ್ಷೆ ವಿಧಿಸಲಾಗಿದೆ ಎಂದು ಅಲ್ಲಿನ ಕೋರ್ಟ್‌ ಎಚ್ಚರಿಕೆಯನ್ನೂ ನೀಡಿದೆ.

ಸಿಂಗಾಪುರದ ಅಟಾರ್ನಿ ಜನರಲ್ಸ್‌ ಚೇಂಬರ್‌ನ ಹಿರಿಯ ಸ್ಟೇಟ್‌ ಕೌನ್ಸೆಲ್‌ ಜಯಪಾಲ್‌, ತಾನು ಕುಡಿದು ವಾಹನ ಚಲಾಯಿಸಿದ್ದಾಗಿ ಒಪ್ಪಿಕೊಂಡಿದ್ದು, ಪೊಲೀಸರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲ ಎಂದಿದ್ದಾರೆ.

ಫೆಬ್ರವರಿ 11ರಂದು ಜಯಪಾಲ್‌ ವಾಹನ ಚಲಾಯಿಸುತ್ತಿದ್ದ ವೇಳೆ, ತಪಾಸಣೆ ನಡೆಸಿರುವ ಪೊಲೀಸರಿಗೆ ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಮಿತಿ ಮೀರಿದ ಮದ್ಯ ಸೇವನೆ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಜಯಪಾಲ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸಿಂಗಾಪುರದಲ್ಲಿ ಕುಡಿದು ವಾಹನ ಚಲಾಯಿಸಿದರೆ ಮೊದಲ ಬಾರಿಯ ಅಪರಾಧಕ್ಕೆ 6 ತಿಂಗಳ ಸಜೆ ಅಥವಾ ಅಧಿಕ ದಂಡ ಹಾಕುವ ಅವಕಾಶವಿದೆ.

 

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...