alex Certify
ಕನ್ನಡ ದುನಿಯಾ       Mobile App
       

Kannada Duniya

ತಾವು ಓದಿದ ಸಂಸ್ಥೆಗೆ ಭಾರೀ ಮೊತ್ತದ ದೇಣಿಗೆ ನೀಡಿದ ಭಾರತೀಯ ದಂಪತಿ

ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ವಿಜ್ಞಾನ ಸಂಸ್ಥೆ ಬಿಐಟಿಎಸ್ ಪಿಳನಿಯ ಕ್ಯಾಂಪಸ್ ಕಾರ್ಯಕ್ರಮಗಳಿಗಾಗಿ ಅದರ ಹಳೆ ವಿದ್ಯಾರ್ಥಿ ದಂಪತಿ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಪ್ರಶಾಂತ್ ಹಾಗೂ ಅನುರಾಧಾ ಫಲಕೃತಿ ಜೋಡಿ ತಾವು ಓದಿದ ಸಂಸ್ಥೆಗೆ 10 ಲಕ್ಷ ಡಾಲರ್ ನೀಡಿದ್ದಾರೆ. ಬಿಐಟಿಎಸ್ ಪಿಳನಿ ಸಂಸ್ಥೆ ಈ ತನಕ ಸ್ವೀಕರಿಸಿರುವ ವೈಯಕ್ತಿಕ ದೇಣಿಗೆಯಲ್ಲಿ ಇದೇ ಗರಿಷ್ಠವಾಗಿದೆ.

ಪ್ರಶಾಂತ್ ಅವರ 1978-83ರ ಬ್ಯಾಚ್‌ ರೂಬಿ ವಾರ್ಷಿಕೋತ್ಸವ ಸಂಭ್ರಮಾಚರಣೆ ನಡೆಸಿದ ವೇಳೆ ಅವರು ಈ ಘೋಷಣೆ ಮಾಡಿದರು. ರಾಜಸ್ಥಾನದ ಪಿಳನಿಯಲ್ಲಿ ಆ ಬ್ಯಾಚ್‌ನ 200ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ವಿಶ್ವಾದ್ಯಂತದಿಂದ ಆಗಮಿಸಿದ್ದರು.

ಈ ದೇಣಿಗೆಯ ಮೂಲಕ ಬಿಐಟಿಎಸ್ ಪಿಳನಿ ಸಂಸ್ಥೆಯು 100 ಕೋಟಿ ರೂ.ನ ಸಂಶೋಧನಾ ಎಂಡೋಮೆಂಟ್ ನಿಧಿಯನ್ನು ಸ್ಥಾಪಿಸಲು ಅಭಿಯಾನವೊಂದನ್ನು ಆರಂಭಿಸುತ್ತಿದೆ. ಈ ನಿಧಿಯು ಸಂಶೋಧನೆಗೆ ಬೋಧಕರು, ಪಿಎಚ್‌ಡಿ ಪದವೀಧರರು ಹಾಗೂ ಸಂಶೋಧಕರನ್ನು ಸೆಳೆಯಲು ನೆರವಾಗಲಿದೆ ಎಂದು ಕುಲಪತಿ ಪ್ರೊ. ಸೌವಿಕ್ ಭಟ್ಟಾಚಾರ್ಯ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...