alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿಗಾಗಿ ಈತ ಮಾಡಿದ್ದ ಪ್ಲಾನ್ ದಂಗಾಗಿಸುವಂತಿದೆ

ಬ್ರಿಟನ್ ಕೋರ್ಟ್ ಒಂದು ತಂದೆ ಹತ್ಯೆಗೆ ಸಂಚು ರೂಪಿಸಿದ್ದ ಭಾರತ ಮೂಲದ ವ್ಯಕ್ತಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹುಡುಗನ ತಂದೆ ಸಿಖ್ ಆಗಿದ್ದು ಮಗನ ಬ್ರಿಟಿಷ್ ಗೆಳತಿಯನ್ನು ಸೊಸೆಯಾಗಿ ಸ್ವೀಕರಿಸಲು ನಿರಾಕರಿಸಿದ್ದ. ಗುರುತೇಜ್ ಸಿಂಗ್ ತಂದೆಯನ್ನು ಕೊಲೆ ಮಾಡಲು ಆನ್ಲೈನಲ್ಲಿ ಸ್ಫೋಟಕ ಸಾಮಗ್ರಿಯನ್ನು ಖರೀದಿ ಮಾಡಿದ್ದ.

2017ರಲ್ಲಿಯೇ ಬ್ರಿಟಿಷ್ ನ್ಯಾಷನಲ್ ಕ್ರೈಂ ಏಜೆನ್ಸಿ ಅಧಿಕಾರಿಗಳು ಯುವಕನನ್ನು ಬಂಧಿಸಿದ್ದರು. ವಿಚಾರಣೆ ನಂತ್ರ ಗುರುತೇಜ್ ನನ್ನು ಕೋರ್ಟ್ ದೋಷಿ ಎಂದು ತೀರ್ಪಿತ್ತಿದೆ. ಗುರುತೇಜ್ ಗರ್ಲ್ ಫ್ರೆಂಡ್ ಗಾಗಿ ತನ್ನ ತಂದೆಯನ್ನು ಹತ್ಯೆಗೈಯಲು ಸ್ಫೋಟಕ ಸಾಮಗ್ರಿ ಖರೀದಿ ಮಾಡಿದ್ದ. ಇದು ದಂಗಾಗಿಸುವ ಘಟನೆ ಎಂದು ಕೋರ್ಟ್ ಹೇಳಿದೆ.

ಗುರುತೇಜ್ ಆನ್ಲೈನ್ ನಲ್ಲಿ ಖರೀದಿಗೆ ಸುಳ್ಳು ವಿಳಾಸ ನೀಡಿದ್ದ. ಈ ಬಗ್ಗೆ ಪೊಲೀಸರಿಗೆ ತಿಳಿಯುತ್ತಿದ್ದಂತೆ ನಕಲಿ ಸ್ಫೋಟಕವನ್ನು ಕಳುಹಿಸಿದ್ದರು. ಅದನ್ನು ಪರೀಕ್ಷಿಸುವ ವೇಳೆ ಗುರುತೇಜ್ ಸಿಕ್ಕಿ ಬಿದ್ದಿದ್ದಾನೆ. ಆತ ಖರೀದಿ ಮಾಡಿದ್ದ ಸ್ಫೋಟಕ ಬ್ಲಾಸ್ಟ್ ಆಗಿದ್ದಲ್ಲಿ ಅನೇಕ ಸಾವು-ನೋವು ಸಂಭವಿಸುತ್ತಿತ್ತು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...