alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾ ಹೊತ್ತ ನಾಯಿಯೇ ಅಂಧನಿಗೆ ಗೈಡ್..!

dog

ಲಂಡನ್ ನಲ್ಲಿರುವ 37 ವರ್ಷದ ಭಾರತೀಯನೊಬ್ಬ ತನ್ನ ನಾಯಿಗೆ ಕ್ಯಾಮರಾ ಅಳವಡಿಸಿದ್ದಾರೆ. ಆತನಿಗೆ ಕಣ್ಣು ಕಾಣಿಸುವುದಿಲ್ಲ, ಲಂಡನ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಾನು ಅನುಭವಿಸುವ ತಾರತಮ್ಯ, ಜನರ ನಿಂದನೆ ಇವೆಲ್ಲವೂ ರೆಕಾರ್ಡ್ ಆಗಲಿ ಎಂಬ ಕಾರಣಕ್ಕೆ ನಾಯಿಗೆ ಕ್ಯಾಮರಾ ಅಳವಡಿಸಿದ್ದಾರೆ.

ಅಮಿತ್ ಪಟೇಲ್ ಒಬ್ಬ ವೈದ್ಯನಾಗಿದ್ರು. ಕೆರಟೋಕೋನಸ್ ಎಂಬ ಕಣ್ಣಿನ ಖಾಯಿಲೆಗೆ ತುತ್ತಾಗಿದ್ದ ಅಮಿತ್ ಪಟೇಲ್ 5 ವರ್ಷಗಳ ಹಿಂದೆ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.

ಅವರಿಗೆ ಈಗ ಮುದ್ದಿನ ನಾಯಿ ಕಿಕಾ ಒಂದೇ ಆಸರೆ, ಅದೇ ಅವರ ಪಾಲಿಗೆ ಗೈಡ್. ಎಲ್ಲಾ ಕಡೆ ಅದನ್ನು ಜೊತೆಗೆ ಕರೆದುಕೊಂಡು ಹೋಗ್ತಾರೆ. ಲಂಡನ್ ನಿವಾಸಿಗಳಿಂದ ತಾನು ಅನುಭವಿಸುವ ತೊಂದರೆಯೆಲ್ಲ ರೆಕಾರ್ಡ್ ಆಗಿರಲಿ ಎಂಬ ಕಾರಣಕ್ಕೆ ನಾಯಿಗೆ GoPro ಕ್ಯಾಮರಾ ಫಿಕ್ಸ್ ಮಾಡಿದ್ದಾರೆ. ಸಂಜೆ ಮನೆಗೆ ಮರಳಿದ ಮೇಲೆ ಅಮಿತ್ ಪತ್ನಿ ಸೀಮಾ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ದೃಶ್ಯಗಳನ್ನೆಲ್ಲ ಪರಿಶೀಲಿಸ್ತಾರೆ. ವಿಶೇಷ ಅಂದ್ರೆ ನಾಯಿ ಕೀಕಾ, ಅಮಿತ್ ಗೆ ರೈಲಿನಲ್ಲಿ ಸೀಟು ಹಿಡಿದುಕೊಡುತ್ತೆ, ಎಲ್ಲಾ ಕಡೆ ಹೋಗಲು ಒಡೆಯನಿಗೆ ದಾರಿ ತೋರಿಸುವ ಕೆಲಸ ಕೂಡ ಈ ನಾಯಿಯದ್ದು.

ಜೊತೆಗೆ ನಾಯಿ ಇದೆ ಎಂಬ ಕಾರಣಕ್ಕೆ ಎಲ್ಲರೂ ತನ್ನನ್ನು ತುಚ್ಛವಾಗಿ ಕಾಣ್ತಾರೆ ಅನ್ನೋದು ಅಮಿತ್ ಆರೋಪ. ರೈಲಿನಲ್ಲಿ ಸೀಟು ಹಿಡಿದು ಕೂರುವಷ್ಟರಲ್ಲಿ ಇನ್ಯಾರೋ ಅದನ್ನು ಆಕ್ರಮಿಸಿಬಿಡ್ತಾರಂತೆ. ಅಂಧನಾದ್ರೂ ತಮಗೆ ಸೀಟು ಬಿಟ್ಟುಕೊಡುವುದಿಲ್ಲ. ಇಂಥ ಘಟನೆಗಳು ನಡೆಯುತ್ತವೆ ಅನ್ನೋ ಕಾರಣಕ್ಕೆ ಕ್ಯಾಮರಾ ಫಿಕ್ಸ್ ಮಾಡಿದ್ದೇನೆ, ಅಸಹಜವಾದದ್ದೇನಾದ್ರೂ ಇದ್ರೆ ದೂರು ಕೊಡುತ್ತೇನೆ ಅಂತಾ ಅಮಿತ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...