alex Certify
ಕನ್ನಡ ದುನಿಯಾ       Mobile App
       

Kannada Duniya

ನೇಪಾಳದಲ್ಲಿ ನಡೆಯಲ್ಲ ಭಾರತದ ಹೊಸ ನೋಟು

noteban

ಭಾರತದಲ್ಲಿ ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳು ನಡೆಯೋದಿಲ್ಲ. ನೇಪಾಳದಲ್ಲಿ ಭಾರತದ ಹೊಸ 500 ಹಾಗೂ 2 ಸಾವಿರ ರೂಪಾಯಿ ನೋಟು ಚಲಾವಣೆಯಾಗೋದಿಲ್ಲ. ಹೌದು ನೇಪಾಳ ಸರ್ಕಾರ ಭಾರತದ ಹೊಸ 500 ಹಾಗೂ 2 ಸಾವಿರ ರೂಪಾಯಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ವಾಸ್ತವವಾಗಿ ನೇಪಾಳದಲ್ಲಿ ಅದರದೇ ಆದ ಕರೆನ್ಸಿ ಇದೆ. ಆದ್ರೆ ಭಾರತದ ರೂಪಾಯಿ ಕೂಡ ಅಲ್ಲಿ ಚಲಾವಣೆಯಾಗ್ತಾ ಇತ್ತು. ಆದ್ರೆ ಸರ್ಕಾರದ ಬಳಿ ಭಾರತದ 500 ಹಾಗೂ ಸಾವಿರ ರೂಪಾಯಿ ಮುಖ ಬೆಲೆಯ ಹಳೆ ನೋಟುಗಳ ಸಂಗ್ರಹ ಹೆಚ್ಚಾಗಿದೆ. ಇದರ ಬದಲಾವಣೆಗೆ ಅವಕಾಶ ಮಾಡಿಕೊಡುವಂತೆ ಸರ್ಕಾರ ಆರ್ ಬಿ ಐ ಬಳಿ ಕೇಳಿತ್ತು. ಆದ್ರೆ ಆರ್ ಬಿ ಐ ಇದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.

ಈ ಬಗ್ಗೆ ನೇಪಾಳ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಯೂ ಮಾತುಕತೆ ನಡೆಸಿದೆ. ಈ ನಡುವೆ ಆರ್ ಬಿ ಐ ಇಲ್ಲಿನ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಿ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...