alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈನಲ್ಲಿ ನೆಲೆಸಿದ್ದ ಕೇರಳಿಗನಿಗೆ ಒಲಿದ ಅದೃಷ್ಟ

ದಿಢೀರ್ ಶ್ರೀಮಂತರಾಗಿ ಹಣದ ಸಮಸ್ಯೆಗಳೆಲ್ಲ ಪರಿಹಾರ ಆಗಲಿ ಎಂದು ಹಲವರು ಲಾಟರಿ ಟಿಕೇಟ್ ಖರೀದಿಸುವುದು ಸಹಜ. ಹಾಗೆ ಲಾಟರಿ ತೆಗೆದುಕೊಂಡಿದ್ದ ಕೇರಳಿಗನಿಗೆ 2.72 ಮಿಲಿಯನ್ ಡಾಲರ್ ಮೊತ್ತದ ಬಹುಮಾನ ಒಲಿದಿದೆ.

ಕೇರಳ ಮೂಲದ ಬ್ರಿಟ್ಟಿ ಮಾರ್ಕೋಸೆ ಎಂಬವರು 2004ರಿಂದ ದುಬೈನ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಲಾಟರಿ ಟಿಕೆಟ್ ಒಂದನ್ನು ಕೊಂಡಿದ್ದರು. ಹೀಗೆ ಈಗಾಗಲೇ ನಾಲ್ಕು ಬಾರಿ ಟಿಕೇಟ್ ಖರೀದಿಸಿದ್ದ ಅವರಿಗೆ ಐದನೇ ಸಲ 10 ಮಿಲಿಯನ್ ದಿರಮ್ಸ್(2.72 ಮಿಲಿಯನ್ ಡಾಲರ್) ಬಹುಮಾನ ಬಂದಿದೆ.

ನನ್ನ ಹೆಂಡತಿ ಮತ್ತು ಇಬ್ಬರು ಪುತ್ರರೂ ಕೇರಳದಲ್ಲಿದ್ದಾರೆ. ನನಗೆ ಸ್ವಲ್ಪ ಸಾಲ ಇದೆ, ಅವುಗಳನ್ನು ಮೊದಲು ತೀರಿಸಿಕೊಳ್ಳುವುದು ನನ್ನ ಅತಿ ಪ್ರಮುಖ ಜವಾಬ್ದಾರಿ ಎಂದು ಬ್ರಿಟ್ಟಿ ಹಣ ಖರ್ಚು ಮಾಡುವ ಕುರಿತು ಹೇಳಿಕೊಂಡಿದ್ದಾರೆ. ಅಂದಹಾಗೆ ಈ ಡ್ರಾದಲ್ಲಿ ಒಂಭತ್ತು ಭಾರತೀಯರು ಹಾಗೂ ಒಬ್ಬ ಪಾಕಿಸ್ತಾನಿ ಬಹುಮಾನ ಗೆದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...