alex Certify
ಕನ್ನಡ ದುನಿಯಾ       Mobile App
       

Kannada Duniya

OMG: 66 ವರ್ಷಗಳ ಬಳಿಕ ಇವರ ಉಗುರುಗಳಿಗೆ ಬೀಳುತ್ತಿದೆ ಕತ್ತರಿ

ಭಾರತದ ಪುಣೆ ಮೂಲದ ಶ್ರೀಧರ್ ಚಿಲ್ಲಾಳ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದರು. ಕಳೆದ 66 ವರ್ಷಗಳಿಂದ ಅವರು ತಮ್ಮ ಎಡಗೈ ಬೆರಳಿನ ಉಗುರುಗಳನ್ನು ಕತ್ತರಿಸದೆ ಹಾಗೇ ಬಿಟ್ಟುಕೊಂಡಿದ್ದು, ಅತಿ ಉದ್ದದ ಉಗುರುಗಳನ್ನು ಹೊಂದಿದ ಕಾರಣಕ್ಕಾಗಿ ಗಿನ್ನಿಸ್ ದಾಖಲೆ ಪುಸ್ತಕವನ್ನೂ ಸೇರಿದ್ದರು.

1952 ರಿಂದಲೂ ಉಗುರುಗಳನ್ನು ಬಿಟ್ಟಿದ್ದ ಶ್ರೀಧರ್ ಚಿಲ್ಲಾಳ 2016 ರಲ್ಲಿ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದರು. ಅವರ ಐದು ಬೆರಳಿನ ಉಗುರುಗಳ ಒಟ್ಟು ಉದ್ದ 909.6 ಸೆಂಟಿಮೀಟರ್ ಗಳಾಗಿದ್ದು, ಅತಿ ಉದ್ದವಾಗಿರುವ ಕಿರುಬೆರಳ ಉಗುರು 197.8 ಸೆಂಟಿ ಮೀಟರ್ ಉದ್ದವಿದೆ.

85 ವರ್ಷದ ಶ್ರೀಧರ್ ಚಿಲ್ಲಾಳ ಇದೀಗ ತಮ್ಮ ಉಗುರಿಗೆ ಕತ್ತರಿ ಹಾಕಲು ಮುಂದಾಗಿದ್ದಾರೆ. ‘ripley’s believe it or not’ ಇದಕ್ಕಾಗಿಯೇ ಚಿಲ್ಲಾಳರನ್ನು ಅಮೆರಿಕಾದ ನ್ಯೂಯಾರ್ಕ್ ಗೆ ಕರೆಸಿಕೊಂಡಿದ್ದು, ಅಲ್ಲಿ ಚಿಲ್ಲಾಳರ ಉಗುರಿಗೆ ಕತ್ತರಿ ಬೀಳಲಿದೆ. ಬಳಿಕ ಈ ಉಗುರುಗಳು ಟೈಮ್ ಸ್ಕ್ವೇರ್ ನಲ್ಲಿರುವ ‘ripley’s believe it or not’ ಮ್ಯೂಸಿಯಂ ಸೇರಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...