alex Certify
ಕನ್ನಡ ದುನಿಯಾ       Mobile App
       

Kannada Duniya

ಹುಚ್ಚು ಪ್ರೀತಿಗಾಗಿ ಅಮೆರಿಕಾ ತಲುಪಿದ ವ್ಯಕ್ತಿ ಈಗ..

2016_4image_

ನವದೆಹಲಿಯಿಂದ ಟೆಕ್ಸಾಸ್ ವರೆಗೆ ಒಂದು ಹುಡುಗಿ ಹಿಂದೆ ಒಂದು ದಶಕದವರೆಗೆ ಸುತ್ತಿದ 32 ವರ್ಷದ ವ್ಯಕ್ತಿಗೆ ಅಮೆರಿಕಾ ನ್ಯಾಯಾಲಯ 19 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜಿತೇಂದ್ರ ಸಿಂಗ್ ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ.

ಜಿತೇಂದ್ರ ಸಿಂಗ್ ಗೆ ಮಹಿಳೆಯ ಪರಿಚಯ ನವದೆಹಲಿಯಲ್ಲಿ ಕಾಲೇಜ್ ಓದುತ್ತಿರುವ ವೇಳೆ ಆಗಿತ್ತು. ಅವರಿಬ್ಬರು ಕೇವಲ ಸಹಪಾಠಿಗಳಾಗಿದ್ದರು. 2006ರಲ್ಲಿ ಸಿಂಗ್ ಮದುವೆಯಾಗುವಂತೆ ಆಕೆಯನ್ನು ಕೇಳಿದ್ದ. ಇದನ್ನು ಆಕೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡಿದ್ದ ಸಿಂಗ್ ಆಕೆಯನ್ನು ಪ್ರತಿದಿನ ಹಿಂಬಾಲಿಸುತ್ತಿದ್ದ. 2007ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಕೆ ನ್ಯೂಯಾರ್ಕ್ ಗೆ ತೆರಳಿದ್ದಳು.

ದೇಶ ಬಿಟ್ಟರೂ ಸಿಂಗ್ ಮಾತ್ರ ಆಕೆಯನ್ನು ಬಿಡಲಿಲ್ಲ. ಆಕೆಯ ತಂದೆಗೆ ಹಿಂಸೆ ನೀಡ್ತಾ ಇದ್ದ. ಇದು ದೆಹಲಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇನ್ನು ಮುಂದೆ ಹೀಗೆ ಮಾಡುವುದಿಲ್ಲವೆಂದು ಭರವಸೆ ನೀಡಿದ್ದ. ಆದ್ರೆ ಅಮೆರಿಕಾಕ್ಕೆ ಬಂದು ಮತ್ತೆ ತನ್ನ ವರಸೆ ತೋರಿಸಿದ್ದಾನೆ. ಅದಕ್ಕಾಗಿ ಈಗ ಶಿಕ್ಷೆ ಅನುಭವಿಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...