alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯನ್ನು ರಕ್ಷಿಸಲು ಮುಂದಾದಾಗ ಕಳ್ಳನ ಕರಾಮತ್ತು

indian-man-in-new-york-saves-co-worker-from-oncoming-train-gets-robbedಅಮೆರಿಕಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ 34 ವರ್ಷದ ವ್ಯಕ್ತಿಯೊಬ್ಬ ರೈಲು ಹಳಿಗಳ ಮೇಲೆ ಬಿದ್ದಿದ್ದ ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ಮುಂದಾದ ವೇಳೆ ಕಳ್ಳನೋರ್ವ ಬೆಲೆಬಾಳುವ ವಸ್ತುಗಳನ್ನು ಇಡಲಾಗಿದ್ದ ಬ್ಯಾಗ್ ಹೊತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಭಾರತೀಯ ಮೂಲದ  ಅನಿಲ್ ವಾನವಲ್ಲಿ ಎಂಬವರು ಮ್ಯಾನ್ ಹಟನ್ ಗೆ ಹೋಗಲು ಎಡಿಸನ್ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಆಗ ಅವರ ಸಹೋದ್ಯೋಗಿ 26 ವರ್ಷದ ಮಾಧುರಿ ರೆಚೆರ್ಲಾ ಆಯತಪ್ಪಿ ರೈಲು ಹಳಿಗಳ ಮೇಲೆ ಬಿದ್ದಿದ್ದಾರೆ. ಕೂಡಲೇ ಆಕೆಯ ನೆರವಿಗೆ ಅನಿಲ್ ಧಾವಿಸಿದ್ದು, ತಾವು ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗ್ ನ್ನು ರೈಲ್ವೇ ಫ್ಲಾಟ್ ಫಾರಂ ಮೇಲಿಟ್ಟಿದ್ದಾರೆ.

ಮಾಧುರಿಯನ್ನು ರಕ್ಷಿಸಿದ ಅನಿಲ್ ತಮ್ಮ ಬ್ಯಾಗ್ ಗೆ ಹುಡುಕಾಡಿದರೆ ಅದು ಮಾಯವಾಗಿತ್ತು. ಕಳ್ಳನೋರ್ವ ಅದನ್ನು ತೆಗೆದುಕೊಂಡು ಹೋಗಿದ್ದು, ಅದರಲ್ಲಿ ಲ್ಯಾಪ್ ಟಾಪ್, 200 ಡಾಲರ್ ನಗದು ಹಾಗೂ ಕೆಲ ದಾಖಲೆಗಳಿದ್ದವೆಂದು ಹೇಳಲಾಗಿದೆ. ಮಹಿಳೆಯೋರ್ವರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ಸಮಯಸಾಧಿಸಿ ಕಳ್ಳ ಕೈಚಳಕ ತೋರಿರುವುದು ಅನಿಲ್ ಅವರಿಗೆ ಬೇಸರ ತರಿಸಿದೆ. ಎಡಿಸನ್ ಟೌನ್ ಶಿಪ್ ಪೊಲೀಸರು ಅನಿಲ್ ಅವರ ಸಾಹಸ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರಲ್ಲದೇ 1000 ಡಾಲರ್ ಚೆಕ್ ನೀಡಿದ್ದಾರೆ. ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ದೃಶ್ಯಾವಳಿಗಳ ಮೂಲಕ ಕಳ್ಳನನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...