alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಕ್ ಪಾಟ್! ದುಡಿಮೆಗೆಂದು ಹೋದವನಿಗೆ ಸಿಕ್ಕಿದ್ದು ದುಡ್ಡಿನ ರಾಶಿ

ದುಬೈ: ದುಬೈನಲ್ಲಿ ಕೆಲಸಕ್ಕಾಗಿ ಹೋದ ಅನೇಕರ ಅದೃಷ್ಟ ಖುಲಾಯಿಸಿ ಲಾಟರಿಯಲ್ಲಿ ಕೋಟ್ಯಂತರ ರೂ. ಬಹುಮಾನ ಗಳಿಸಿದ್ದಾರೆ. ಅದೇ ರೀತಿ ಕೇರಳದ ಜಾನ್ ವರ್ಗೀಸ್ ಅವರಿಗೆ ಲಾಟರಿಯಲ್ಲಿ ಬರೋಬ್ಬರಿ 21.21 ಕೋಟಿ ರೂ. ಬಹುಮಾನ ಬಂದಿದೆ.

ದುಬೈನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿರುವ ಜಾನ್ ವರ್ಗೀಸ್, ಬಿಗ್ ಟಿಕೆಟ್ ರಾಫೆಲ್ ಲಾಟರಿಯಲ್ಲಿ 21.21 ಕೋಟಿ ರೂ. ಬಹುಮಾನವನ್ನು ಗಳಿಸುವ ಮೂಲಕ ಗಮನಸೆಳೆದಿದ್ದಾರೆ.

2016 ರಿಂದ ದುಬೈನಲ್ಲಿ ಚಾಲಕರಾಗಿ ಜಾನ್ ವರ್ಗೀಸ್ ಕೆಲಸ ಮಾಡುತ್ತಿದ್ದು, ಗೆಳೆಯರೊಂದಿಗೆ ಸೇರಿ ಲಾಟರಿ ಖರೀದಿಸುವ ಹವ್ಯಾಸವಿತ್ತು. ಅವರು ಖರೀದಿಸಿದ ಲಾಟರಿಗೆ ಬಹುಮಾನ ಬಂದಿದ್ದು, ಸ್ನೇಹಿತರೊಂದಿಗೆ ಬಹುಮಾನದ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ.

ಮೊದಲಿಗೆ ತಮಗೆ ಇಷ್ಟೊಂದು ಮೊತ್ತದ ಬಹುಮಾನ ಬಂದಿರುವ ಕುರಿತು ನಂಬಲು ಸಾಧ್ಯವಾಗಿರಲಿಲ್ಲ. ತಮಾಷೆ ಮಾಡಿರಬಹುದೆಂದು ಭಾವಿಸಿದ್ದೆ ಎಂದು ಜಾನ್ ಹೇಳಿದ್ದಾರೆ. ಕುಟುಂಬ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಹಣ ಬಳಸುವೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...