alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪೊಲೀಸರಿಗೆ ಇನ್ನಿಲ್ಲದ ಕಾಟ ಕೊಟ್ಟ ಭಾರತೀಯ

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್ ಪೊಲೀಸರಿಗೆ ಅಪರಿಚಿತ ಭಾರತೀಯ ವ್ಯಕ್ತಿ ಇನ್ನಿಲ್ಲದ ಕಾಟ ಕೊಟ್ಟಿದ್ದು, ಹೈರಾಣಾಗಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪಾಕ್ ನ ‘ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿರುವಂತೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುವ ವ್ಯಕ್ತಿ, ‘ಜೈ ಹಿಂದ್’ ಘೋಷಣೆ ಕೂಗಿದ್ದಲ್ಲದೇ, ಕರೆ ಸ್ವೀಕರಿಸಿದ ಪೊಲೀಸರಿಗೆ ‘ಜೈ ಹಿಂದ್’ ಘೋಷಣೆ ಕೂಗಲು ಒತ್ತಾಯಪಡಿಸಿದ್ದಾನೆ.

ಡಿಸೆಂಬರ್ 25 ರಂದು ಬೆಳಿಗ್ಗೆ 3.30 ರ ಒಳಗೆ ಹಲವು ಸಲ ಕರೆ ಮಾಡಿದ ವ್ಯಕ್ತಿ, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಬೇಕೆಂದು ಬೇಡಿಕೆ ಇಟ್ಟಿದ್ದು, ಇದಕ್ಕೆ ನಿರಾಕರಿಸಿದಾಗ, ಆಕ್ಷೇಪಾರ್ಹ ಭಾಷೆ ಬಳಸಿ ಮಾತನಾಡಿದ್ದಾನೆ. ಮೊದಲಿಗೆ ಇದನ್ನು ನಿರ್ಲಕ್ಷಿಸಿದರೂ ಬಳಿಕ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.

ಪಾಕಿಸ್ತಾನ ಟೆಲಿ ಕಮ್ಯೂನಿಕೇಷನ್ ಕಂಪನಿ ಲಿಮಿಟೆಡ್(ಪಿ.ಟಿ.ಸಿ.ಎಲ್.) ನೆರವಿನಿಂದ ಭಾರತದಿಂದ ಕರೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಕರೆ ಮಾಡಿದ ವ್ಯಕ್ತಿ, ತನ್ನ ಹೆಸರು ಝಾಶೆ. ಭಾರತದಿಂದ ಕರೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾಗಿ ಕರೆಯನ್ನು ಸ್ವೀಕರಿಸಿದ್ದ ಇಸ್ಲಾಮಾಬಾದ್ ಪೊಲೀಸ್ ಕಂಟ್ರೋಲ್ ರೂಂ ಇನ್ಸ್ ಪೆಕ್ಟರ್ ಶಬ್ಬೀರ್ ಅಹಮ್ಮದ್ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...