alex Certify
ಕನ್ನಡ ದುನಿಯಾ       Mobile App
       

Kannada Duniya

ಕೆನಡಾದಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ

ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ 27 ವರ್ಷದ ಯುವಕನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ತನ್ನ ಅಪಾರ್ಟ್‌ಮೆಂಟ್‌ ನಲ್ಲಿದ್ದ ಪಲ್ವಿಂದರ್‌ ನನ್ನು ನಾಲ್ವರು ಹುಡುಗರು ಗುಂಡಿಟ್ಟು ಕೊಲೆ ಮಾಡಿದ್ದು, ಬ್ರಾಮ್‌ಪ್ಟನ್‌ ಸಿಟಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಪಲ್ವಿಂದರ್‌ 2009 ರಿಂದ ಕೆನಡಾದಲ್ಲಿ ಟ್ರಕ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಲ್ಲಿ ಒಬ್ಬ 18 ಹಾಗೂ ಮತ್ತೊಬ್ಬ 19 ವರ್ಷದವನು ಎಂದು ತಿಳಿದು ಬಂದಿದೆ. ಕಳೆದ 2 ದಿನಗಳ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿ ಸಂಭ್ರಮಾಚರಣೆ ಮಾಡಿದ್ದ ಪಲ್ವಿಂದರ್‌ ಸಿಂಗ್‌, ಈ ರೀತಿ ಸಾವನ್ನಪ್ಪಿರುವುದು ಆಘಾತಕಾರಿ ಸಂಗತಿ ಎಂದು ಸ್ನೇಹಿತರು ಶೋಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...