alex Certify
ಕನ್ನಡ ದುನಿಯಾ       Mobile App
       

Kannada Duniya

ಕರಾಚಿಯ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾರೆ ಭಾರತದ ತಜ್ಞ ವೈದ್ಯ

ಭಾರತದ ಪ್ರಸಿದ್ಧ ಲಿವರ್ ಕಸಿ ಸರ್ಜನ್ ಡಾ. ಸುಭಾಷ್ ಗುಪ್ತಾ ಪಾಕಿಸ್ತಾನದ ಕರಾಚಿಗೆ ತೆರಳಲಿದ್ದಾರೆ. ಅಲ್ಲಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಜೊತೆಗೆ ಪಾಕಿಸ್ತಾನದ ವೈದ್ಯರಿಗೆ ತರಬೇತಿ ಕೂಡ ನೀಡಲಿದ್ದಾರೆ.

ಇದೇ ತಿಂಗಳು ತಮ್ಮ ತಂಡದೊಂದಿಗೆ ಡಾ.ಗುಪ್ತಾ, ಕರಾಚಿಯ ಡಾ ಯೂನಿವರ್ಸಿಟಿ ಆಫ್ ಹೆಲ್ತ್ & ಸೈನ್ಸಸ್ ಗೆ ಭೇಟಿ ನೀಡಲಿದ್ದಾರೆ. ಓಝಾ ಕ್ಯಾಂಪಸ್ ನಲ್ಲಿ 3-4 ರೋಗಿಗಳಿಗೆ ಡಾ.ಗುಪ್ತಾ ಲಿವರ್ ಕಸಿ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಈ ವಿಚಾರವನ್ನು ಯೂನಿವರ್ಸಿಟಿಯ ವೈಸ್ ಚಾನ್ಸಿಲರ್ ಬಹಿರಂಗಪಡಿಸಿದ್ದಾರೆ.

2017ರ ಡಿಸೆಂಬರ್ ನಲ್ಲಿ ಸಹ ಡಾ.ಗುಪ್ತಾ ಕರಾಚಿಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಈ ಬಾರಿ ಹಿರಿಯ ವಿದೇಶಿ ವೈದ್ಯರು ಕೂಡ ಡಾ.ಗುಪ್ತಾಗೆ ಸಹಕಾರ ನೀಡಲಿದ್ದಾರೆ. ಭಾರತ-ಪಾಕಿಸ್ತಾನ ನಡುವಣ ಸಂಘರ್ಷ ಮುಂದುವರಿದಿದ್ದರೂ ಭಾರತೀಯ ವೈದ್ಯರೊಬ್ಬರು ಶತ್ರುರಾಷ್ಟ್ರದ ರೋಗಿಗಳಿಗೆ ನೆರವಾಗುತ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...