alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲಗಾರರಿಂದ ತಪ್ಪಿಸಿಕೊಳ್ಳಲು 3 ನೇ ಮಹಡಿಯಿಂದ ಹಾರಿದ….

ಹಣಕಾಸಿನ ಸಮಸ್ಯೆಯಿಂದಾಗಿ ಭಾರತೀಯನೊಬ್ಬ ಮೂರನೇ ಮಹಡಿಯಿಂದ ಹಾರಿ ಆಸ್ಪತ್ರೆ ಸೇರಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಘಟನೆ ಅರಬ್ ರಾಷ್ಟ್ರದಲ್ಲಿ ನಡೆದಿದೆ.

32 ವರ್ಷದ ಎ.ಕೆ. ಎಂಬ ವ್ಯಕ್ತಿ ಅಪಾರ್ಟ್ ಮೆಂಟ್ನ ಮೂರನೇ ಮಹಡಿಯಿಂದ ಜಿಗಿದು ಈಗ ಪ್ರಾಣಾಪಾಯ ಎದುರಿಸ್ತಿದ್ದಾನೆ. ಸೌದಿ ಅರೇಬಿಯಾದ ಅಲ್ ಬಹರೇನ್ನಲ್ಲಿ ವಾಸವಿದ್ದ ಈತ ಹಲವು ದಿನಗಳಿಂದ ಸಾಲಗಾರರ ಸಮಸ್ಯೆಯನ್ನು ಎದುರಿಸುತ್ತಿದ್ದ . ಸಾಲಗಾರರೊಂದಿಗೆ ಜಗಳವನ್ನು ಆಡಿದ್ದ. ಎ.ಕೆ. ವಾಸವಿದ್ದ ಅಪಾರ್ಟ್ಮೆಂಟ್ ನತ್ತ ಸಾಲಗಾರರು ಬೆನ್ನಟ್ಟಿ ಬರುತ್ತಿರೋದನ್ನ ಕಂಡಂತಾ ಎ.ಕೆ. ತಾನು ವಾಸವಿದ್ದ ಅಪಾರ್ಟ್ಮೆಂಟ್ನ ಮೂರನೇ ಮಹಡಿಯ ಬಾಲ್ಕನಿಯಿಂದ ಹಾರಿಬಿಟ್ಟ.

ಕೂಡಲೇ ಆತನನ್ನ ಸ್ಥಳೀಯರೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯಕ್ಕೆ ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಮೂಳೆ ಮುರಿತದ ತೊಂದರೆಯನ್ನ ಅವನು ಎದುರಿಸ್ತಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...