alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಮೂಲದ ವ್ಯಕ್ತಿಗೆ ಜಾಕ್ ಪಾಟ್! ದುಬೈನಲ್ಲಿ ಆತ ಗೆದ್ದ ಹಣವೆಷ್ಟು ಗೊತ್ತಾ…?

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗೆ ಲಾಟರಿ ಹೊಡೆದಿದೆ. ಕುವೈತ್ ನಲ್ಲಿ ಕಾರ್ಯನಿರ್ವಾಹಕ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ, ಅನಿಲ್ ವರ್ಗಿಸ್ ಥೆವರಿಲ್ ಗೆ ಸರಿ ಸುಮಾರು 7 ಮಿಲಿಯನ್ ದಿರಮ್ಸ್ ಲಾಟರಿ ಹೊಡೆದಿದೆ.

ಅಂದ್ರೆ ಇಂಡಿಯನ್ ಕರೆನ್ಸಿಯಲ್ಲಿ ಇದರ ಮೌಲ್ಯ ಬರೋಬ್ಬರಿ 12 ಕೋಟಿ ರೂಪಾಯಿ. ಅಬುಧಾಬಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ನಡೆದ ಬಿಗ್ ಟಿಕೆಟ್ ಮಿಲಿಯನೇರ್ ಡ್ರಾನಲ್ಲಿ ಅನಿಲ್ ವರ್ಗಿಸ್ಗೆ 12 ಕೋಟಿ ಲಾಟರಿ ಹೊಡೆದಿದೆ. ಈ ಲಾಟರಿ ಜಾಕ್ ಪಾಟ್ ನ ಎಂಟು ಮಂದಿ ವಿನ್ನರ್ ನಲ್ಲಿ 6 ಮಂದಿ ಭಾರತೀಯರಾಗಿದ್ದಾರೆ. ಇವರೆಲ್ಲಾ ಒಂದು ದಶಲಕ್ಷ ದಿರಾಮ್ ಪ್ರೈಜ್ ಪಡೆದಿದ್ದಾರೆ.

ಕಳೆದ 20 ವರ್ಷಗಳಿಂದ ಕುವೈತ್ ನಲ್ಲಿ ವಾಸವಾಗಿರುವ ವರ್ಗೀಸ್, ಆನ್ ಲೈನ್ ನಲ್ಲಿ 11197 ನಂಬರ್ ನ ಟಿಕೆಟ್ ಖರೀದಿಸಿದ್ರು. ಕಾರಣ ಈ ನಂಬರ್ ಅವರ ಮಗನ ಬರ್ತ್ ಡೇಟ್ ಆಗಿತ್ತು. ತಮ್ಮ ಮಗ ತಮಗೆ ಲಕ್ಕಿ ಚಾರ್ಮ್ ಆಗಿದ್ರಿಂದ ಈ ನಂಬರ್ ಖರೀದಿಸಿದ್ರು. ವರ್ಗಿಸ್, ಬಿಗ್ ಟಿಕೆಟ್ ಲಾಟರಿಯನ್ನು ಇದು ಎರಡನೇ ಬಾರಿ ಖರೀದಿಸುತ್ತಿರೋದು.

ಈ ಬಾರಿ ಖರೀದಿಸಿದಾಗ ತಮಗೆ ಲಾಟರಿ ಸಿಗುತ್ತೆ ಅಂತಾ ವರ್ಗೀಸ್ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಬಿಗ್ ಟಿಕೆಟ್ ಪ್ರೈಸ್ ನಲ್ಲಿ ಅವರಿಗೆ ಲಾಟರಿ ಹೊಡೆಯುತ್ತಿದ್ದಂತೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈಗಲೂ ಕೂಡಾ ತನಗೆ ಅಷ್ಟೊಂದು ದುಡ್ಡು ಸಿಕ್ಕಿದಿಯಾ ಅಂತಾ ಅವರ ಕೈಯನ್ನ ಅವರೇ ಚಿವುಟಿ ಕೊಳ್ತಿದ್ದಾರೆ…! ಇನ್ನುಳಿದ ಏಳು ಮಂದಿಯಲ್ಲಿ ಒಬ್ಬ ಬಾಂಗ್ಲಾ ದೇಶದವ, ಮತ್ತೊಬ್ಬ ಮಾಕ್ರೋನಾದ ಪ್ರಜೆಯಾಗಿದ್ದು, ಉಳಿದ ಐದು ಮಂದಿ ಭಾರತೀಯರೇ ಆಗಿದ್ದಾರೆ. ಇವರೆಲ್ಲಾ ಒಂದು ದಶಲಕ್ಷ ದಿರಮ್ ಮನೆಗೊಯ್ಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...