alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಫ್ರೀ ಸ್ಮಾರ್ಟ್ಫೋನ್ ಗೆ ಬೇಡಿಕೆಯಿಟ್ಟ ಭೂಪ

ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ OnePlus, OnePlus 5T ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಭಾರತದಲ್ಲಿ ನವೆಂಬರ್ 21 ರಿಂದ ಈ ಸ್ಮಾರ್ಟ್ಫೋನ್ ಇ ಕಾಮರ್ಸ್ ವೆಬ್ ಸೈಟ್ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. OnePlus 5T ಸ್ಮಾರ್ಟ್ಫೋನ್ ನಲ್ಲಿ ಕೆಲ ವಿಶೇಷತೆಗಳಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.

ಈ ಮಧ್ಯೆ ಭಾರತದ ಕೃಷ್ಣಕುಮಾರ್ ಎಂಬವರು OnePlus ಕಂಪನಿಯ ಸಹ ಸಂಸ್ಥಾಪಕ Carl Pei ಅವರಿಗೆ ಇ ಮೇಲ್ ರವಾನಿಸಿದ್ದು, ಗಿಫ್ಟ್ ಆಗಿ ತನಗೆ OnePlus 5T ಸ್ಮಾರ್ಟ್ಫೋನ್ ನೀಡಬೇಕೆಂಬ ಕೋರಿಕೆಯಿಟ್ಟಿದ್ದಾರೆ. ತಮ್ಮ one plus one ಸ್ಮಾರ್ಟ್ ಫೋನ್ ನಲ್ಲಿ ರಿ ಬೂಟ್ ಸಮಸ್ಯೆಯಿದ್ದು, ತಕ್ಷಣವೇ ತನಗೆ 5T ಸ್ಮಾರ್ಟ್ಪೋನ್ ಕಳುಹಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ 5T ಯಶಸ್ಸಿನ ಕುರಿತು ತಾನು ಪ್ರಥಮವಾಗಿ ಹೇಳಲಿದ್ದು, ಸ್ಮಾರ್ಟ್ಪೋನ್ ತನಗೆ ನೀಡಬೇಕಾದ್ದು, ‘Natural Right’ ಎಂದಿದ್ದಾರೆ ಕೃಷ್ಣಕುಮಾರ್.

Carl Pei ಈ ಇ ಮೇಲ್ ಸಂದೇಶವನ್ನು ಶೇರ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮಾಷೆಯ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಹಲವಾರು ಮಂದಿ ತಮಗೂ OnePlus 5T ಸ್ಮಾರ್ಟ್ಪೋನ್ ಗಿಫ್ಟ್ ಆಗಿ ನೀಡಬೇಕೆಂದು ಕೋರಿದ್ದಾರೆ. ಒಬ್ಬರಂತೂ ತಾನು ಹಲವು ವರ್ಷಗಳಿಂದ OnePlus ಕಂಪನಿಯ ಫೋನ್ ಗಳನ್ನೇ ಬಳಸುತ್ತಿದ್ದು, OnePlus 5T ಪಡೆಯುವುದು ತನ್ನ ‘Natural Right’ ಎಂದು ತಮಾಷೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...