alex Certify
ಕನ್ನಡ ದುನಿಯಾ       Mobile App
       

Kannada Duniya

ಒಮ್ಮೆಲೇ 85 ಭಾಷೆಗಳಲ್ಲಿ ಹಾಡಲಿದ್ದಾಳೆ ಭಾರತದ ಬಾಲೆ

ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಬಾಲಕಿಯೊಬ್ಬಳು ಒಂದೇ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡು ಹೇಳುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮಾಡಲು ಸಜ್ಜಾಗಿದ್ದಾಳೆ. 12 ವರ್ಷದ ಬಾಲಕಿ ಸುಚೇರಾ ಸತೀಶ್ ಸದ್ಯ 7 ತರಗತಿಯಲ್ಲಿ ಓದುತ್ತಿದ್ದಾಳೆ.

ಡಿಸೆಂಬರ್ 29 ರಂದು ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸಲಾಗಿದೆ. ಅಲ್ಲಿ 85 ಭಾಷೆಗಳಲ್ಲಿ ಸುಚೇತಾ ಹಾಡು ಹೇಳಲಿದ್ದಾಳೆ. ಕೇವಲ ಒಂದು ವರ್ಷದಲ್ಲೇ 80 ಭಾಷೆಗಳಲ್ಲಿ ಹಾಡುವುದನ್ನು ಸುಚೇತ ಕಲಿತಿದ್ದಾಳಂತೆ. ಇನ್ನು ಐದು ವಿವಿಧ ಭಾಷೆಗಳ ಹಾಡು ಕಲಿತು, ಗಿನ್ನಿಸ್ ದಾಖಲೆ ಮಾಡುವುದು ಅವಳ ಆಸೆ.

ಸುಚೇರಾ ಮೂಲತಃ ಕೇರಳದವಳು. ಹಿಂದಿ, ಮಲಯಾಳಂ, ಇಂಗ್ಲಿಷ್, ತಮಿಳು ಭಾಷೆಗಳಲ್ಲೂ ಹಾಡು ಹೇಳಲಿದ್ದಾಳೆ. ಸುಚೇತಾ ಮೊದಲು ಜಪಾನೀ ಭಾಷೆಯಲ್ಲಿ ಹಾಡುವುದನ್ನು ಕಲಿತಿದ್ದಳಂತೆ. ಹೀಗೆ ನಿಧಾನವಾಗಿ ಫ್ರೆಂಚ್, ಜರ್ಮನ್, ಹಂಗೇರಿಯನ್ ಸೇರಿದಂತೆ ಒಟ್ಟು 80 ಭಾಷೆಗಳ ಹಾಡನ್ನು ಕರಗತ ಮಾಡಿಕೊಂಡಿದ್ದಾಳೆ.

ಸದ್ಯ ಅತಿ ಹೆಚ್ಚು ಭಾಷೆಗಳಲ್ಲಿ ಹಾಡು ಹೇಳಿರುವ ವಿಶ್ವ ದಾಖಲೆ ಆಂಧ್ರಪ್ರದೇಶದ ಕೇಸಿರಾಜು ಶ್ರೀನಿವಾಸ್ ಅವರ ಹೆಸರಲ್ಲಿದೆ. 2008ರಲ್ಲಿ ಇವರು ಒಟ್ಟು 76 ಭಾಷೆಗಳಲ್ಲಿ ಹಾಡು ಹೇಳುವ ಮೂಲಕ ದಾಖಲೆ ನಿರ್ಮಿಸಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...