alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದು ವಾಹನ ಚಾಲನೆ ಮಾಡಿ ನಿಷೇಧಕ್ಕೊಳಗಾದ ಭಾರತೀಯ ವಿದ್ಯಾರ್ಥಿ

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಯೊಬ್ಬ ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಆತನ ವಾಹನ ಚಾಲನಾ ಪರವಾನಗಿಯನ್ನ 10 ತಿಂಗಳ ಕಾಲ ಅಮಾನತುಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ತೆಲಂಗಾಣ ಮೂಲದ 24 ವರ್ಷದ ಸೂರ್ಯತೇಜ್ ಪೆನುಗೊಂಡ ಎಂಬಾತ ಈಗ ಆಸ್ಟ್ರೇಲಿಯಾವನ್ನು ತೊರೆಯಬೇಕಾದ ಪರಿಸ್ಥಿತಿಯೂ ಎದುರಾಗಿದೆ.

ಸ್ಟೂಡೆಂಟ್ ವೀಸಾದ ಅಡಿಯಲ್ಲಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಸೂರ್ಯತೇಜ್ ಗೆ 750 ಡಾಲರ್ ದಂಡವನ್ನು ಕೂಡ ನ್ಯಾಯಾಲಯ ವಿಧಿಸಿದೆ. ಜುಲೈ 8ನೇ ತಾರೀಕಿನಂದು ನಡೆದಂತಾ ಘಟನೆ ಇದಾಗಿದ್ದು, ಸೂರ್ಯತೇಜ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಪಾನಮತ್ತನಾಗಿ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿತ್ತು.

ಸಂಜೆ 6.30ರ ಸುಮಾರಿಗೆ ಪೊಲೀಸರು ಸೂರ್ಯತೇಜ್ ಕಾರ್ ಪರಿಶೀಲನೆಗೆ ಒಳಪಡಿಸೋಕೆ ಮುಂದಾದಾಗ ಆತ ಹೆದ್ದಾರಿಯ ಪಕ್ಕದಲ್ಲಿದ್ದ ಚರಂಡಿಯ ಮೇಲೆ ಕಾರು ನಿಲ್ಲಿಸಿದ. ಪೊಲೀಸರು ಕೇಳಿದಾಗ ತಾನು ಮದ್ಯಪಾನ ಮಾಡಿಲ್ಲ ಅಂತಾನೇ ಸೂರ್ಯ ತೇಜ್ ಸುಳ್ಳು ಹೇಳಿದ್ದ. ಆನಂತರ ಆತನನ್ನ ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವನು ಮದ್ಯಪಾನ ಮಾಡಿರೋದು ಸಾಬೀತಾಯ್ತು. ವೈದ್ಯಕೀಯ ವರದಿಯ ಆಧಾರದ ಮೇಲೆ ಪೊಲೀಸರು ಸೂರ್ಯತೇಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...