alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದ ಭಾರತೀಯ ಶವವಾಗಿ ಪತ್ತೆ

ಅಬುದಾಬಿ: ನಾಪತ್ತೆಯಾಗಿದ್ದ ಕೇರಳ ಮೂಲದ ಬ್ಯಾಂಕ್‌ ಉದ್ಯೋಗಿಯ ಶವ ಮುಸಾಫ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾಗಿದೆ. ಜಬ್ಬಾರ್‌ ಕೆ.ಪಿ. ಮೃತ ದುರ್ದೈವಿ. ಕೇರಳದ ಕಣ್ಣೂರಿನವರಾದ ಜಬ್ಬಾರ್‌, ಅಬುದಾಬಿಯ ಬ್ಯಾಂಕ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಕಳೆದು ಒಂದು ವಾರದಿಂದ ಜಬ್ಬಾರ್‌ ಕಾಣೆಯಾಗಿದ್ದ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಬ್ಬಾರ್‌ ಸಾವಿನ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಮುಸಾಫ ಕೈಗಾರಿಕಾ ಪ್ರದೇಶದಲ್ಲಿ ಜಬ್ಬಾರ್‌ ದೇಹ ಕಳೆದ ವಾರ ಪತ್ತೆಯಾಗಿತ್ತು. ಆದರೆ ವಾರಸುದಾರರು ಇಲ್ಲದ ಹಿನ್ನೆಲೆಯಲ್ಲಿ ಶವಾಗಾರದಲ್ಲಿ ಇರಿಸಲಾಗಿತ್ತು.

ಜಬ್ಬಾರ್‌ ಸಾವಿನ ಕುರಿತು ಸಹೋದ್ಯೋಗಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಮೂಲಕ ತಿಳಿದು ಬಂತು. ಜಬ್ಬಾರ್‌ ಗೆ ಯಾರೂ ಶತ್ರುಗಳಿರಲಿಲ್ಲ. ಸಾವಿಗೆ ಕಾರಣ ತಿಳಿಯುತ್ತಿಲ್ಲ. ದೇಹ ಪತ್ತೆಯಾದ ನಿಖರ ದಿನವೂ ನನಗೆ ತಿಳಿದಿಲ್ಲ ಎಂದು ಸಹೋದರ ಮುನೀರ್‌ ಹೇಳಿದ್ದಾರೆ. ಜಬ್ಬಾರ್‌ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...