alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಿಷಸ್ ನಲ್ಲಿ ಯೋಗಿ ಮುಂದೆ ರಾಷ್ಟ್ರಧ್ವಜಕ್ಕೆ ಅವಮಾನ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾರಿಷಸ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಯೋಗಿ ಆದಿತ್ಯನಾಥ್ ವಲಸಿಗರ ಘಾಟ್ ಗೆ ಭೇಟಿ ನೀಡಿದ್ದರು. ಭೇಟಿ ವೇಳೆ ಯೋಗಿ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಯೋಗಿ ಕುಳಿತಿದ್ದ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ಆದ್ರೆ ಭಾರತದ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿತ್ತು.

ಸಿಎಂ ಯೋಗಿ ಈ ಫೋಟೋವನ್ನು ಟ್ವೀಟರ್ ಗೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗ್ತಿದ್ದಂತೆ ಟ್ವೀಟರ್ ಬಳಕೆದಾರರಿಂದ ವಿರೋಧ ವ್ಯಕ್ತವಾಗಿದೆ. ಸಿಎಂ ಯೋಗಿ ವಿರುದ್ಧವೂ ಜನರು ಗುಡುಗಿದ್ದಾರೆ. ಯೋಗಿ ಖಾಸಗಿ ಟ್ವೀಟರ್ ನಿರ್ವಹಿಸುವ ಸಿಬ್ಬಂದಿ ಫೋಟೋವನ್ನು ಟ್ವೀಟರ್ ನಿಂದ ತೆಗೆದು ಹಾಕಿದ್ದಾರೆ. ಇದೇ ವೇಳೆ ಮಾರಿಷಸ್ ಸಾಂಸ್ಕೃತಿಕ ಸಚಿವಾಲಯ ಇಡೀ ವಿಷ್ಯದ ಬಗ್ಗೆ ಕ್ಷಮೆ ಕೇಳಿದೆ.

ಉಳಿದ ಎಲ್ಲ ಕಡೆ ಧ್ವಜವನ್ನು ನೇರವಾಗಿ ಹಾರಿಸಲಾಗಿತ್ತು. ಆದ್ರೆ ಇಲ್ಲಿ ಮಾತ್ರ ತಪ್ಪು ನಡೆದಿದೆ ಎಂದು ಮಾರಿಷಸ್ ಸರ್ಕಾರಿ ಮೂಲಗಳು ಹೇಳಿವೆ. ಯೋಗಿ ಜೊತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಉಪಸ್ಥಿತರಿದ್ದರು. ಆದ್ರೆ ಅವರೂ ಕೂಡ ಧ್ವಜದ ಬಗ್ಗೆ ಗಮನ ನೀಡಿರಲಿಲ್ಲ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...