alex Certify
ಕನ್ನಡ ದುನಿಯಾ       Mobile App
       

Kannada Duniya

‘ಗಣಪತಿ ಬಪ್ಪ ಮೋರ್ಯಾ’ ಕೇಳುತ್ತಿದ್ದಂತೆಯೇ ಗಪ್ ಚುಪ್ಪಾದ ಪಾಕ್ ಅಭಿಮಾನಿಗಳು

ಭಾರತ-ಪಾಕ್ ಪಂದ್ಯವೆಂದರೆ ಕೇವಲ ಮೈದಾನದಲ್ಲಿ ಆಟಗಾರರು ಮಾತ್ರವಲ್ಲದೇ, ಪಂದ್ಯ ವೀಕ್ಷಿಸಲು ಆಗಮಿಸಿದ ಪ್ರೇಕ್ಷಕರಿಗೂ ಅಷ್ಟೇ ಕ್ರೇಜ್ ಇರುತ್ತದೆ. ಈ‌ ರೀತಿಯ ಹೈ‌ವೋಲ್ಟೇಜ್ ಪಂದ್ಯದಲ್ಲಿ ಎದುರಾಳಿ ದೇಶದ ಅಭಿಮಾನಿಗಳಿಗೆ ಟಾಂಗ್ ನೀಡುವುದು ಸಾಮಾನ್ಯ.

ಇದೇ ರೀತಿಯ ಘಟನೆ ಭಾನುವಾರ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿಯೂ ನಡೆದಿದ್ದು, ಪಾಕಿಸ್ತಾನವನ್ನು ಭಾರತ ಸೋಲಿಸಿರುವುದು ಒಂದೆಡೆಯಾದರೆ, ಪಾಕಿಸ್ತಾನಿ ಅಭಿಮಾನಿಗಳಿಗೆ ಭಾರತೀಯರು ಟಾಂಗ್ ನೀಡಿದ ವಿಡಿಯೊ ಇದೀಗ ವೈರಲ್ ಆಗಿದೆ.

ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಮಾಡುತ್ತಿದ್ದಾಗ, ಪಾಕಿಸ್ತಾನದ ಅಭಿಮಾನಿಯೊಬ್ಬಳು, “ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗುವ ಮೂಲಕ ಪಾಕಿಸ್ತಾನದ ಆಟಗಾರರಿಗೆ ಚೀರ್ಸ್ ಮಾಡುತ್ತಿದ್ದಳು. ಆದರೆ ಬಳಿಕ ಪಂದ್ಯದ ಹಿಡಿತ ಪಾಕಿಸ್ತಾನದಿಂದ ಕಸಿದುಕೊಂಡ ಭಾರತ, ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದಂತೆ, ಭಾರತೀಯ ಅಭಿಮಾನಿಯೊಬ್ಬಳು, “ಗಣಪತಿ ಬಪ್ಪ ಮೋರೆಯ” ಎಂದು ಕೂಗು ಹಾಕುವ ಮೂಲಕ, ಭಾರತೀಯ ಆಟಗಾರರಿಗೆ ಪ್ರೋತ್ಸಾಹ ಮಾಡುವುದರೊಂದಿಗೆ, ಪಾಕ್ ನ ಅಭಿಮಾನಿಗೆ ಟಾಂಗ್ ನೀಡಿದ್ದಾಳೆ. ಭಾರತೀಯರ ಪ್ರಾಬಲ್ಯ ಹೆಚ್ಚಾಗಿ, ಪಾಕ್ ಸೋಲಿನ ದಡಕ್ಕೆ ಸೇರುವುದು ಖಚಿತವಾಗುತ್ತಿದ್ದಂತೆ, ಪಾಕ್ ಅಭಿಮಾನಿ ಬೇಸರಗೊಂಡು ಮೂಲೆಯಲ್ಲಿ ಕುಳಿತಿದ್ದಾಳೆ.

ಪಂದ್ಯದ ಬಳಿಕ ಟ್ವೀಟರ್ ಹಾಗೂ ಫೇಸ್ ಬುಕ್ ನಲ್ಲಿ ಈ ವಿಡಿಯೊವನ್ನು ಕೆಲವರು ಹಾಕುವ ಮೂಲಕ, “ಭಾರತದ ಶಕ್ತಿ” ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...