alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟೆ ಕಾಯುವ ಕೆಲಸ ಮಾಡ್ತಿದ್ದ ಎಂಜಿನಿಯರ್

camel

ವಿದೇಶದಲ್ಲಿ ಕೆಲಸ ಮಾಡಬೇಕೆನ್ನುವುದು ಅನೇಕರ ಕನಸು. ಭಾರತದಲ್ಲಿ ಓದಿ ವಿದೇಶಕ್ಕೆ ಓಡುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕೆಲ ದೇಶಗಳಲ್ಲಿ ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ತಾರೆ. ಇದಕ್ಕೆ ಕೊಲ್ಕತ್ತಾದ ಎಂಜಿನಿಯರ್ ಉತ್ತಮ ಉದಾಹರಣೆ.

ಕೋಲ್ಕತ್ತಾದ ಆಟೋಮೊಬೈಲ್ ಎಂಜಿನಿಯರ್ ಒಬ್ಬನನ್ನು ಸೌದಿ ಅರೆಬಿಯಾದಲ್ಲಿ ಗುಲಾಮಗಿರಿಗೆ ನೂಕಲಾಗಿದೆ. ವರದಿ ಪ್ರಕಾರ ಏಜೆಂಟ್ ಒಬ್ಬ ಜಯಂತ್ ಬಿಸ್ವಾಸ್ ಎಂಬ ಎಂಜಿನಿಯರ್ ನನ್ನು ಸೌದಿ ಅರೆಬಿಯಾದ ವ್ಯಕ್ತಿಯೊಬ್ಬನಿಗೆ ಗುಲಾಮನನ್ನಾಗಿ ಮಾರಾಟ ಮಾಡಿದ್ದಾನೆ.

ಜಯಂತ್ ಕೆಲಸ ಕೊಡಿಸುವಂತೆ ಏಜೆಂಟ್ ಗೆ ತಿಳಿಸಿದ್ದ ಎನ್ನಲಾಗಿದೆ. ಮೇ 15ರಂದು ಜಯಂತ್ ನನ್ನು ಸೌದಿ ಅರೇಬಿಯಾದ ವ್ಯಕ್ತಿಯೊಬ್ಬನಿಗೆ ಏಜೆಂಟ್ ಮಾರಿದ್ದಾನೆ. ಅಲ್ಲಿ ಜಯಂತ್ ಒಂಟೆ ಹಿಂಡು ಕಾಯುವ ಕೆಲಸ ಮಾಡಿದ್ದಾನೆ. ಹೇಗೋ ಮಾಲೀಕನ ಮನೆಯಿಂದ ತಪ್ಪಿಸಿಕೊಂಡು ಬಂದ ಜಯಂತ್, ಭಾರತೀಯ ರಾಯಭಾರಿ ಕಚೇರಿಗೆ ಬಂದಿದ್ದಾನೆ. ಸದ್ಯ ಅಧಿಕಾರಿಗಳು ಜಯಂತ್ ನನ್ನು ಎನ್ ಜಿ ಓಗೆ ಹಸ್ತಾಂತರಿಸಿದ್ದಾರೆ.

ವರದಿ ಪ್ರಕಾರ ಈ ಹಿಂದೆಯೂ ಜಯಂತ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದ್ರೆ ಮಾಲೀಕನ ಕೈಗೆ ಸಿಕ್ಕಿ ಬಿದ್ದಿದ್ದ. ಆಗ ಮಾಲೀಕ, ಜಯಂತ್ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದನಂತೆ. ಮತ್ತೊಮ್ಮೆ ಓಡಿ ಹೋಗಲು ಯತ್ನಿಸಿದಾಗ ಕಳ್ಳತನದ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದ. ಮನೆಯಿಂದ ಹಣ ಪಡೆದು ಜೈಲಿನಿಂದ ಜಯಂತ್ ಬಿಡುಗಡೆಗೊಂಡಿದ್ದನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...