alex Certify
ಕನ್ನಡ ದುನಿಯಾ       Mobile App
       

Kannada Duniya

ಗೇ ಮದುವೆಯಲ್ಲಿ ನಡೀತು ಮೆಹಂದಿ, ಅರಿಶಿನ ಪದ್ಧತಿ

ಮಹಾರಾಷ್ಟ್ರದಲ್ಲಿ ಸಲಿಂಗಕಾಮಿಗಳು ಮದುವೆಯಾಗಿದ್ದಾರೆ. ಮೂಲತಃ ಯವತಮಾಲ್ ನಲ್ಲಿ ನೆಲೆಸಿರುವ ಹೃಷಿ ಸೇಠವಾನ್ ವಿಯಟ್ನಾಂನ ಹುಡುಗನೊಬ್ಬನ ಕೈ ಹಿಡಿದಿದ್ದಾನೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಹೃಷಿ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡ್ತಿದ್ದಾನೆ.

ಕಳೆದ ಅಕ್ಟೋಬರ್ ನಲ್ಲಿ ಹೃಷಿ ಹಾಗೂ ವಿಯೆಟ್ನಾಂನಲ್ಲಿ ವಾಸವಾಗಿರುವ ವಿನ್ ಪರಿಚಯವಾಗಿದೆ. ಡೇಟಿಂಗ್ ಸೈಟ್ ಮೂಲಕ ಇಬ್ಬರು ಸ್ನೇಹಿತರಾಗಿದ್ದಾರೆ. ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್ ಸಲಿಂಗಕಾಮಿ ಕಾನೂನಿನ ಬಗ್ಗೆ ಮಹತ್ವದ ತೀರ್ಪು ನೀಡಿತ್ತು. ಸಲಿಂಗಕಾಮಿಗಳ ನಡುವಿನ ಸಂಬಂಧ ಅಪರಾಧವಲ್ಲ.ಈ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೆ ಪರಿಶೀಲನೆ ನಡೆಸಲಿದೆ ಎಂದಿತ್ತು.

ಹೃಷಿ ಸಲಿಂಗಕಾಮಿಯನ್ನು ಮದುವೆಯಾಗಲು ತಂದೆಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆದ್ರೆ ತಾಯಿ ಮದುವೆಗೆ ಒಪ್ಪಿಗೆ ನೀಡಿಲ್ಲ. ಮದುವೆ ಸಮಾರಂಭಕ್ಕೂ ಆಕೆ ಹಾಜರಾಗಿಲ್ಲ. ಮದುವೆ ಫೋಟೋಗಳನ್ನು ಹೃಷಿ ಫೇಸ್ಬುಕ್ ಅಕೌಂಟ್ ನಲ್ಲಿ ಹಾಕಿದ್ದಾನೆ. 40 ವರ್ಷದ ಹೃಷಿ ಬಳಿ ಅಮೆರಿಕಾ ಗ್ರೀನ್ ಕಾರ್ಡ್ ಇದೆ.

ಡಿಸೆಂಬರ್ 30ರಂದು ಹೃಷಿ ಹೊಟೇಲ್ ಒಂದರಲ್ಲಿ ಮದುವೆಯಾಗಿದ್ದಾನೆ. ಮದುವೆಗೆ 70-80 ಜನ ಬಂದಿದ್ದರಂತೆ. 10 ಗೇ ದಂಪತಿ ಕೂಡ ಹಾಜರಿದ್ದರಂತೆ. ಸಂಪ್ರದಾಯದಂತೆ ಮೆಹಂದಿ, ಅರಿಶಿನ ಶಾಸ್ತ್ರವನ್ನೆಲ್ಲ ಮಾಡಿ ಮದುವೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...