alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರ ಮಾಂಸ ಖಾದ್ಯದ ಸುದ್ದಿಯಿಂದ ಬಂದ್ ಆಯ್ತು ಹೋಟೆಲ್

human-meat

ಲಂಡನ್ ನಲ್ಲಿರುವ ಭಾರತೀಯ ಮೂಲದ ಹೋಟೆಲ್ ಒಂದರಲ್ಲಿ ಮನುಷ್ಯರ ಮಾಂಸದಿಂದ ತಿನಿಸುಗಳನ್ನು ತಯಾರಿಸಲಾಗ್ತಿದೆ ಎಂಬ ಸುಳ್ಳು ಸುದ್ದಿ ಫೇಸ್ಬುಕ್ ನಲ್ಲಿ ವೈರಲ್ ಆಗಿತ್ತು. ಪರಿಣಾಮ ಅನಿವಾರ್ಯವಾಗಿ ಹೋಟೆಲ್ ಅನ್ನು ಬಂದ್ ಮಾಡಬೇಕಾಗಿ ಬಂದಿದೆ.

ಶಿನ್ರಾ ಬೇಗಂ ಎಂಬಾಕೆ ‘ಕರ್ರಿ ಟ್ವಿಸ್ಟ್’ ಎಂಬ ಹೋಟೆಲ್ ಅನ್ನು ನಡೆಸ್ತಾ ಇದ್ರು. ಪ್ರಾಂಕ್ ನ್ಯೂಸ್ ವೆಬ್ ಸೈಟ್ ಒಂದು ಹೋಟೆಲ್ ನಲ್ಲಿ ಮನುಷ್ಯರ ಮಾಂಸದ ಖಾದ್ಯಗಳನ್ನು ಮಾಡ್ತಿದ್ದಾರೆ ಅಂತಾ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದೆ.

ಮನುಷ್ಯರ 9 ಮೃತದೇಹಗಳನ್ನು ಫ್ರೀಝ್ ಮಾಡಿ ಇಡಲಾಗಿದೆ. ಅದನ್ನೇ ಮಾಂಸದ ಬಗೆಬಗೆಯ ಖಾದ್ಯಗಳಿಗೆ ಬಳಸಲಾಗುತ್ತದೆ ಅಂತೆಲ್ಲಾ ಬರೆಯಲಾಗಿತ್ತು. ಈ ಸುದ್ದಿ ನಿಜ ಎಂದುಕೊಂಡು ರೊಚ್ಚಿಗೆದ್ದ ಕೆಲವರು ಹೋಟೆಲ್ ಬಂದ್ ಮಾಡುವಂತೆ ಎಚ್ಚರಿಸಿದ್ದಾರೆ. ಹೋಟೆಲ್ ಬಾಗಿಲು ತೆರೆದಿದ್ದೇ ಆದ್ರೆ ಸಂಪೂರ್ಣ ಅದನ್ನು ಧ್ವಂಸ ಮಾಡೋದಾಗಿ ಜನರೇ ಎಚ್ಚರಿಕೆ ನೀಡಿದ್ರು, ಪೊಲೀಸರನ್ನೂ ಕರೆತಂದಿದ್ರು. ಹಾಗಾಗಿ ಶಿನ್ರಾ ಹೋಟೆಲ್ ಬಂದ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...