alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತೆಗೆ ಕಿರುಕುಳ ನೀಡಿ ಸಂಕಷ್ಟಕ್ಕೆ ಸಿಲುಕಿದ ವೈದ್ಯ

ಭಾರತೀಯ ಮೂಲದ ವೈದ್ಯನೊಬ್ಬ ವಿಮಾನ ಪ್ರಯಾಣದ ವೇಳೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದಾನೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ತನಿಖೆ ನಡೆಸಿದ ಪೊಲೀಸರು ವೈದ್ಯನ ವಿರುದ್ದ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿದ್ದಾರೆ.

29 ವರ್ಷದ ವಿಜಯ್ ಕುಮಾರ್ ಕೃಷ್ಣಪ್ಪ, ಜುಲೈ 23 ರಂದು ಸೀಟೆಲ್ ನಿಂದ ನ್ಯೂಜೆರ್ಸಿಗೆ ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ 16 ವರ್ಷದ ಬಾಲಕಿಯನ್ನು ಅನುಚಿತವಾಗಿ ಸ್ಪರ್ಷಿಸಿದ್ದನೆನ್ನಲಾಗಿದೆ.

ನಿದ್ರೆಯಲ್ಲಿದ್ದ ಬಾಲಕಿ ಮೊದಲಿಗೆ ಇದು ಆಕಸ್ಮಿಕವಾಗಿ ನಡೆದ ಘಟನೆಯೆಂದು ಭಾವಿಸಿ ಮತ್ತೆ ನಿದ್ರೆಗೆ ಜಾರಿದ್ದು, ಆತ ಮತ್ತದೇ ಕೆಲಸ ಮಾಡಿದ್ದನೆನ್ನಲಾಗಿದೆ. ಬಳಿಕ ಬಾಲಕಿ ವಿಮಾನ ಸಿಬ್ಬಂದಿ ಬಳಿ ತನ್ನ ಅಳಲು ತೋಡಿಕೊಂಡಿದ್ದು, ಆಕೆಗೆ ಬದಲಿ ಸೀಟಿನ ವ್ಯವಸ್ಥೆ ಮಾಡಲಾಗಿತ್ತು. ಬಾಲಕಿ ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಲ್ಲಿ ಬಂದಿಳಿದ ವೇಳೆ ಘಟನೆ ಕುರಿತು ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಳು. ತಕ್ಷಣವೇ ಅವರು ದೂರು ದಾಖಲಿಸಿದ್ದು, ಇದೀಗ ಭಾರತೀಯ ಮೂಲದ ವೈದ್ಯನನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...