alex Certify
ಕನ್ನಡ ದುನಿಯಾ       Mobile App
       

Kannada Duniya

ಇವರ ನೆರವಿಗೆ ಮುಂದಾಗಿದ್ದಾರೆ ಭಾರತ ಮೂಲದ ಉದ್ಯಮಿ

indian-businessman-pledges-1-million-dollars-toward-freeing-prisoners-from-jail-in-uaeದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರು ಶಿಕ್ಷೆಯ ಅವಧಿ ಮುಗಿದಿದ್ದರೂ ದಂಡದ ಮೊತ್ತ ಪಾವತಿಸಲು ವಿಫಲರಾಗಿ ಇನ್ನೂ ಜೈಲುಗಳಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಇಂತವರ ದಂಡದ ಮೊತ್ತವನ್ನು ಪಾವತಿಸಲು 1 ಮಿಲಿಯನ್ ಡಾಲರ್ ಹಣವನ್ನು ನೀಡಿದ್ದಾರೆ.

ಪ್ಯೂರ್ ಗೋಲ್ಡ್ ಜ್ಯುವೆಲರ್ಸ್ ನ ಸಂಸ್ಥಾಪಕ ಹಾಗೂ ಛೇರ್ಮನ್ ಆಗಿರುವ ಫಿರೋಜ್ ಮರ್ಚೆಂಟ್ ಇಷ್ಟು ಮೊತ್ತದ ನೆರವು ನೀಡಿದ್ದು, ಈಗಾಗಲೇ ಅಜ್ಮನ್ ಸೆಂಟ್ರಲ್ ಜೈಲಿನಲ್ಲಿರುವ ಶಿಕ್ಷಾವಧಿ ಪೂರ್ಣಗೊಳಿಸಿರುವ 132 ಮಂದಿಯ ಬಿಡುಗಡೆಗಾಗಿ 40 ಸಾವಿರ ಡಾಲರ್ ಪಾವತಿಸಲಾಗಿದೆ.

ಜೈಲುಗಳಲ್ಲಿರುವ ಖೈದಿಗಳ ಪೈಕಿ ಬಹುತೇಕರು ಭಾರತ, ಪಾಕಿಸ್ತಾನ, ನೇಪಾಳ, ಇಂಡೋನೇಷ್ಯಾ, ಬಾಂಗ್ಲಾದೇಶ, ಫಿಲಿಫೈನ್ಸ್, ಶ್ರೀಲಂಕಾ, ಉಜ್ಬೇಕಿಸ್ತಾನ್, ಸಿರಿಯಾ, ಯಮೆನ್, ಇಥಿಯೋಪಿಯಾ, ಘಾನಾ, ಒಮನ್ ಮೊದಲಾದ ದೇಶದವರಾಗಿದ್ದು, ಇವರುಗಳು ಜೈಲಿನಿಂದ ಬಿಡುಗಡೆಗೊಂಡ ಬಳಿಕ ತವರಿಗೆ ಮರಳಲು ವಿಮಾನದ ಟಿಕೇಟ್ ಸಹ ಮಾಡಿಸಿಕೊಡಲು ಫಿರೋಜ್ ಮರ್ಚೆಂಟ್ ತೀರ್ಮಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...