alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಟ್ಯಾಂತರ ವೆಚ್ಚದಲ್ಲಿ ಮಸೀದಿ ನಿರ್ಮಿಸಿಕೊಟ್ಟ ಕ್ರಿಶ್ಚಿಯನ್ ಉದ್ಯಮಿ

ಯುಎಇ ಯಲ್ಲಿ ಉದ್ಯಮವನ್ನು ನಡೆಸುತ್ತಿರುವ ಭಾರತೀಯ ಮೂಲದ ಉದ್ಯಮಿ ಸಜಿ ಚೆರಿಯನ್ ನೌಕರರ ಪ್ರಾರ್ಥನೆಗೆಂದು ಸುಮಾರು 2.4 ಕೋಟಿ ರೂ. ವೆಚ್ಚದಲ್ಲಿ ಮಸೀದಿ ನಿರ್ಮಿಸಿದ್ದು, ಸಜಿ ಚೆರಿಯನ್ ರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

2003 ರಲ್ಲಿ ಯುಎಇ ಗೆ ತೆರಳಿದ್ದ ಸಜಿ ಚೆರಿಯನ್ ಇಂದು ಕೋಟ್ಯಾಂತರ ಮೌಲ್ಯದ ಉದ್ಯಮವನ್ನು ಮುನ್ನಡೆಸುತ್ತಿದ್ದು, ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ನಿಂತಿದ್ದಾರೆ. ಅಲ್ ಹಯಾಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಪ್ರಾರ್ಥನೆಗೆಂದು ಮಸೀದಿ ಇರುವ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿದ್ದುದು ಸಜಿ ಚೆರಿಯನ್ ರ ಗಮನಕ್ಕೆ ಬಂದಿತ್ತು.

ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಸೀದಿ ನಿರ್ಮಿಸಲು ತೀರ್ಮಾನಿಸಿದ ಸಜಿ ಚೆರಿಯನ್ ಇದಕ್ಕಾಗಿ 2.4 ಕೋಟಿ ರೂ. ಗಳನ್ನು ವ್ಯಯಿಸಿದ್ದಾರೆ. ಕ್ರಿಶ್ಚಿಯನ್ ಆಗಿರುವ ಚೆರಿಯನ್ ರ ಕಾರ್ಯಕ್ಕೆ ಕೈಜೋಡಿಲು ಸ್ಥಳೀಯಾಡಳಿತವೂ ಮುಂದಾಗಿದ್ದು, ಉಚಿತ ವಿದ್ಯುತ್ ಹಾಗೂ ನೀರನ್ನು ನೀಡಲು ಮುಂದಾಗಿತ್ತು. ಅಲ್ಲದೇ ಹಲವರು ವಿವಿಧ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿದ್ದರು. ಆದರೆ ಇದೆಲ್ಲವನ್ನೂ ನಯವಾಗಿ ನಿರಾಕರಿಸಿದ ಸಜಿ ಚೆರಿಯನ್ ತಮ್ಮ ಸ್ವಂತ ಹಣದಿಂದಲೇ ನಿರ್ಮಾಣ ಕಾರ್ಯ ಪೂರೈಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...