alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿ ಓದುತ್ತಿರುವ ಮಗಳ ಸೇವೆಗೆ 12 ಸಿಬ್ಬಂದಿ ನೇಮಕ ಮಾಡಿದ ಭಾರತೀಯ ಕುಟುಂಬ

ಬ್ರಿಟನ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಸುದ್ದಿಗೆ ಬಂದಿದ್ದಾಳೆ. ಪರೀಕ್ಷೆ ಫಲಿತಾಂಶದಿಂದಾಗ್ಲಿ ಇಲ್ಲ ಒಳ್ಳೆ ಹುದ್ದೆಗೆ ಆಯ್ಕೆಯಾಗಿರುವ ಕಾರಣಕ್ಕೆ ಚರ್ಚೆಗೆ ಬಂದಿಲ್ಲ. ಶ್ರೀಮಂತ ಪಾಲಕರು ಆಕೆಗೆ ನೀಡಿರುವ ಸೌಲಭ್ಯಗಳು ಸುದ್ದಿಯಾಗಿವೆ.

ಮಾಧ್ಯಮಗಳ ಪ್ರಕಾರ, ವಿದ್ಯಾರ್ಥಿನಿ ಸ್ಕಾಟ್ಲ್ಯಾಂಡ್ ನ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಳೆ. ಮಗಳ ವಿದ್ಯಾಭ್ಯಾಸಕ್ಕಾಗಿ ಪಾಲಕರು ದೊಡ್ಡ ಬಂಗಲೆ ಜೊತೆ 12 ಸಿಬ್ಬಂದಿಯನ್ನು ಮನೆ ಕೆಲಸಕ್ಕೆ ನೇಮಕ ಮಾಡಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೆ ನೆರವಾಗಲು 4 ಮಂದಿ ತಜ್ಞರನ್ನು ನೇಮಕ ಮಾಡಲಾಗಿದೆ.

ಮಗಳ ವಿದ್ಯಾಭ್ಯಾಸ, ಮನೆ ಕೆಲಸಕ್ಕೆ ಅನುಭವಿ ಹಾಗೂ ನುರಿತ ಸಿಬ್ಬಂದಿ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಟ್ಲರ್ ಕೆಲಸ ಕೇವಲ ಇಂದಿನ ಆಹಾರವೇನು ಮತ್ತೆ ಹೇಗೆ ತಯಾರಿಸಲಾಗ್ತಿದೆ ಎಂಬುದನ್ನು ನೋಡುವುದಾಗಿದೆ. ಫುಡ್ಮ್ಯಾನ್ ಅದನ್ನು ಸರ್ವ್ ಮಾಡುವ ಜೊತೆಗೆ ಟೇಬಲ್ ಕ್ಲೀನ್ ಮಾಡುತ್ತಾನೆ.

ಭಾರತೀಯ ಮೂಲದ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ವಿದೇಶದಲ್ಲಿ ಇಷ್ಟು ಹಣ ಸುರಿಯುತ್ತಿರುವುದು ಇದೇ ಮೊದಲ ಘಟನೆಯಾಗಿದೆ. ಸಿಬ್ಬಂದಿ ನೇಮಕಕ್ಕೆ ಕುಟುಂಬಸ್ಥರು ನೀಡಿದ ಜಾಹೀರಾತು ಎಲ್ಲರ ಗಮನ ಸೆಳೆದಿದೆ. ಸಿಬ್ಬಂದಿ ಕೆಲಸದ ಪಟ್ಟಿಯಲ್ಲಿ ಅಗತ್ಯವೆನಿಸಿದಾಗ ಬಾಗಿಲು ತೆರೆಯುವುದು, ದಿನಚರಿ ಸಿದ್ಧಪಡಿಸುವುದು, ವಾರ್ಡ್ ರೋಬ್  ಕ್ಲೀನ್ ಮಾಡುವುದು ಸೇರಿದಂತೆ ವೈಯಕ್ತಿಕ ಶಾಪಿಂಗ್ ಸೇರಿದೆ. ಮೂಲಗಳ ಪ್ರಕಾರ, ಅಗತ್ಯವಾದಾಗ ಮನೆ ಬಾಗಿಲು ತೆರೆಯುವ ಸಿಬ್ಬಂದಿ ಸಂಬಳ 30,000 ಪೌಂಡ್ ಪ್ರತಿ ವರ್ಷವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...