alex Certify
ಕನ್ನಡ ದುನಿಯಾ       Mobile App
       

Kannada Duniya

ನೆಲಸಮವಾಗಲಿದೆ ತಾಜ್ ಮಹಲ್ ಮಾದರಿಯ ಕಟ್ಟಡ

AUS TAJತಾಜ್ ಮಹಲ್ ಮಾದರಿಯಲ್ಲಿ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಿರ್ಮಾಣವಾಗಿದ್ದ ಮಹಲು ನೆಲಸಮವಾಗಲಿದೆ. 70 ಮಿಲಿಯನ್ ಡಾಲರ್ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿತ್ತು.

‘ತಾಜ್ ಮಹಲ್-ಆನ್-ದಿ-ಸ್ವಾನ್’ ಹೆಸರಿನ ಈ ಮಹಲು ವಿವಾದಿತ ಭಾರತೀಯ ಉದ್ಯಮಿ ಪಂಕಜ್ ಓಸ್ವಾಲ್ ಅವರಿಗೆ ಸೇರಿದ್ದು. ಕಟ್ಟಡ ನಿಯಮ ಉಲ್ಲಂಘನೆ ಮತ್ತು ತೆರಿಗೆ ಕಟ್ಟದ ಆರೋಪದ ಮೇಲೆ ತಾಜ್ ಮಾದರಿಯ ಮಹಲನ್ನು ಕೆಡವಿ ಹಾಕಲು ಆಸ್ಟ್ರೇಲಿಯಾದ ಸಿಟಿ ಕೌನ್ಸಿಲ್ ಮುಂದಾಗಿದೆ.

ಸ್ವಾನ್ ನೈದಿ ನೈರುತ್ಯ ಕರಾವಳಿಯನ್ನು ಸೇರುವ ಜಾಗದಲ್ಲಿ ತಾಜ್ ಮಹಲ್ ಮಾದರಿಯ ಕಟ್ಟಡ ನಿರ್ಮಿಸಬೇಕೆಂದು ಪಂಕಜ್ ಮತ್ತವರ ಪತ್ನಿ ರಾಧಿಕಾ ಯೋಜನೆ ಹಾಕಿಕೊಂಡಿದ್ರು. ಅದರಂತೆ ಅದ್ಭುತ ಮಹಲು ನಿರ್ಮಾಣವಾಗಿದೆ. 7 ಗುಮ್ಮಟ, ಮಂದಿರ, ಜಿಮ್, ಈಜುಕೊಳ ಮತ್ತು 17 ಕಾರುಗಳನ್ನು ನಿಲ್ಲಿಸಬಲ್ಲ ಪಾರ್ಕಿಂಗ್ ಜಾಗವನ್ನುಳ್ಳ ಸುಂದರ ಮಹಲು ಇದು.

2010ರಲ್ಲಿ ಗೊಬ್ಬರ ಉದ್ಯಮದಲ್ಲಿ ನಷ್ಟ ಅನುಭವಿಸಿದ ಪಂಕಜ್ ಓಸ್ವಾಲ್, ಆಸ್ಟ್ರೇಲಿಯಾ ತೊರೆದಿದ್ದರು. ತೆರಿಗೆ ವಂಚಿಸಿದ ಆರೋಪ ಕೂಡ ಅವರ ಮೇಲಿತ್ತು. ಮಿಲಿಯನ್ ಡಾಲರ್ ಗಟ್ಟಲೆ ಬ್ಯಾಂಕ್ ಲೋನ್ ಪಡೆದಿರುವ ಪಂಕಜ್ ಈಗ ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಕಟ್ಟಡವನ್ನು ಸೆಪ್ಟೆಂಬರ್ ಅಂತ್ಯದೊಳಗೆ ನೆಲಸಮ ಮಾಡುವುದಾಗಿ ಕಳೆದ ವರ್ಷವೇ ಹೇಳಿತ್ತು.

ಆದ್ರೆ ಇನ್ನೂ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿಲ್ಲ. ಮುಂದಿನ ತಿಂಗಳು ನೆಲಸಮ ಕಾರ್ಯ ಆರಂಭವಾಗೋ ಸಾಧ್ಯತೆ ಇದೆ. ಕಟ್ಟಡ ನೆಲಸಮಕ್ಕೆ 300,000 ಡಾಲರ್ ವೆಚ್ಚವಾಗಲಿದೆ ಅಂತಾ ಅಂದಾಜಿಸಲಾಗಿದೆ. ಆದ್ರೆ ಆ ಜಾಗದ ಮಾಲೀಕತ್ವ ಪಂಕಜ್ ಅವರಿಗೇ ಸೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...