alex Certify
ಕನ್ನಡ ದುನಿಯಾ       Mobile App
       

Kannada Duniya

OMG! 20 ಕೋಟಿ ರೂ. ಮೌಲ್ಯದ ಕಾರಿಗೆ 25 ಕೋಟಿ ರೂ. ವೆಚ್ಚದಲ್ಲಿ ಪೇಂಟಿಂಗ್

ಕ್ರಿಸ್ ಸಿಂಗ್ ಒಬ್ಬ ಕಾರು ಪ್ರಿಯ. ಫ್ಲೋರಿಡಾ ಮೂಲದ ಈ ಉದ್ಯಮಿ ಬಳಿ ವೆರೈಟಿ ವೆರೈಟಿ ಕಾರುಗಳಿವೆ. 25 ಕೋಟಿ ರೂಪಾಯಿ ಬೆಲೆಬಾಳುವ ಲ್ಯಾಂಬೋರ್ಗಿನಿ ವೆನೆನೋ ಕಾರು ಇವರ ಬಳಿಯಿದೆ. ಅಷ್ಟೇ ಅಲ್ಲ ಕ್ರಿಸ್ 19 ಕೋಟಿ ಮೌಲ್ಯದ Koenigsegg Agrera XS ಕಾರಿಗೂ ಒಡೆಯ.

ಎಲ್ಲಕ್ಕಿಂತ ವಿಶೇಷವಾದುದು Aston Martin Valkyrie ಹೈಪರ್ ಕಾರು. ಇದರ ಬೆಲೆ 20 ಕೋಟಿ ರೂಪಾಯಿ. ಈ ಕಾರಿಗೆ ಚಂದ್ರನ ಧೂಳಿನಿಂದ ಪೇಂಟ್ ಮಾಡಿಸ್ತಿದ್ದಾರೆ ಕ್ರಿಸ್ ಸಿಂಗ್. ಚಂದ್ರನ ಅಂಗಳದಿಂದ್ಲೇ ತಂದಿರುವ ಕಲ್ಲೊಂದನ್ನು ಕ್ರಿಸ್ ಖರೀದಿ ಮಾಡಿದ್ದಾರಂತೆ.

ಅದನ್ನು ಚೆನ್ನಾಗಿ ಪುಡಿ ಮಾಡಿ ಆ ಪೌಡರ್ ಅನ್ನು Karosserie Lunar Red ಪೇಂಟ್ ಶೇಡ್ ಗೆ ಬಳಸಲಾಗುತ್ತದೆ. ಆದ್ರೆ ಕ್ರಿಸ್ ಸಿಂಗ್ ಗೆ ಚಂದ್ರನ ಮೇಲಿನ ಕಲ್ಲು ಸಿಕ್ಕಿದ್ದೆಲ್ಲಿ? ಹೇಗೆ ಅನ್ನೋದು ಮಾತ್ರ ಸ್ಪಷ್ಟವಾಗಿಲ್ಲ. ಚಂದ್ರನ ಧೂಳಿನಿಂದ ಪೇಂಟಿಂಗ್ ಮಾಡಲು 25 ಕೋಟಿ ರೂಪಾಯಿ ಖರ್ಚಾಗಲಿದೆ ಅಂತಾ ಅಂದಾಜಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...