alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಹಸ್ತಾಂತರಕ್ಕೆ ಲಂಡನ್ ನಲ್ಲಿ ಕಾರ್ಯತಂತ್ರ

vijay_mallya_apr24

ಮದ್ಯದ ದೊರೆ ಮಲ್ಯ ಬಂಧನಕ್ಕೆ ಲಂಡನ್ ನಲ್ಲಿ ಕಾರ್ಯತಂತ್ರ ರೂಪಿಸಲಾಗ್ತಾ ಇದೆ. ಮಲ್ಯ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ, ಯುಕೆ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ.

ಈಗಾಗಲೇ ಸಿಬಿಐ ಹಾಗೂ ಇಡಿ ತಂಡ ಲಂಡನ್ ನಲ್ಲಿ ಬೀಡು ಬಿಟ್ಟಿದೆ. ಗುರುವಾರ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರಿಶಿ ಯುಕೆ ರಾಯಭಾರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇನ್ನು ಯುಕೆ ಗೃಹ ಇಲಾಖೆಯ ಕಾರ್ಯದರ್ಶಿ ಪಾಟ್ಸ್ ವಿಲ್ಕಿನ್ಸನ್ ಭೇಟಿ ಮಾಡಲಿರುವ ರಾಜೀವ್, ಮಲ್ಯ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಮಲ್ಯ ವಿಚಾರದ ಜೊತೆ ವೀಸಾ ಸೇರಿದಂತೆ ಇನ್ನೂ ಅನೇಕ ವಿಷಯಗಳ ಬಗ್ಗೆ ಉಭಯ ದೇಶಗಳ ಕಾರ್ಯದರ್ಶಿಗಳು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

61 ವರ್ಷದ ಮಲ್ಯ 9 ಸಾವಿರ ಕೋಟಿ ರೂ. ಸಾಲ ಮಾಡಿ ಭಾರತದಿಂದ ಲಂಡನ್ ಗೆ ಓಡಿ ಹೋಗಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಭಾರತ, ಸರ್ಕಾರ ಯುಕೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಕಳೆದ ತಿಂಗಳು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಮಲ್ಯರನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಲ್ಯಗೆ ಜಾಮೀನು ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...