alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಭಾರತದ ಮೇಲೆ 4.3 ಲಕ್ಷಕ್ಕೂ ಅಧಿಕ ಸೈಬರ್ ದಾಳಿ

ನವದೆಹಲಿ: ಪ್ರಸಕ್ತ ವರ್ಷದ ಜನವರಿಯಿಂದ ಜೂನ್ ವರೆಗೆ ಭಾರತದ ಮೇಲೆ ಸುಮಾರು 4.3 ಲಕ್ಷಕ್ಕೂ ಅಧಿಕ ಸೈಬರ್ ದಾಳಿಯಾಗಿದೆ! ಇದು ಚೀನಾ, ರಷ್ಯಾ ಮತ್ತು ಅಮೆರಿಕ ಸಹಿತ 5 ದೇಶಗಳ ಹ್ಯಾಕರ್ ಗಳು ದಾಳಿ ನಡೆಸಿದ್ದಾರೆ ಎಂದು ಸೈಬರ್ ರಕ್ಷಣಾ ಸಂಸ್ಥೆ ವರದಿ ನೀಡಿದೆ.

ಅಂತರ್ಜಾಲ ರಕ್ಷಣಾ ಸಂಸ್ಥೆಯಾದ ಹನಿಪಾಟ್ ವರದಿ ಪ್ರಕಾರ, ರಷ್ಯಾ, ಅಮೆರಿಕ, ಚೀನಾ, ನೆದರ್ ಲ್ಯಾಂಡ್ ಮತ್ತು ಜರ್ಮನಿ ದೇಶಗಳ ಹ್ಯಾಕರ್ ಗಳು ಭಾರತವನ್ನು ಗುರಿಯಾಗಿಸಿ 4,36,090 ಸೈಬರ್ ದಾಳಿಯನ್ನು ನಡೆಸಿದ್ದಾರೆ.

ರಷ್ಯಾದಿಂದ 2,55,589, ಅಮೆರಿಕ- 1,03,458. ಚೀನಾ 43,544, ನೆದರ್ ಲ್ಯಾಂಡ್- 19,169 ಮತ್ತು ಜರ್ಮನಿಯಿಂದ 15,330 ಬಾರಿ ಸೈಬರ್ ದಾಳಿಗಳು ನಡೆದಿವೆ ಎಂದು ಹನಿಪಾಟ್ ವರದಿ ಮಾಡಿದೆ.

ಇದೇ ವೇಳೆ ಭಾರತದ ಹ್ಯಾಕರ್ ಗಳು ಆಸ್ಟ್ರಿಯಾ, ನೆದರ್ ಲ್ಯಾಂಡ್, ಅಮೆರಿಕ, ಜಪಾನ್ ಮತ್ತು ಉಕ್ರೇನ್ ಮೇಲೆ 36,563 ಸೈಬರ್ ದಾಳಿಯನ್ನು ಮಾಡಿದ್ದಾರೆ. ಆಸ್ಟ್ರಿಯಾ-12,540, ನೆದರ್ ಲ್ಯಾಂಡ್- 9,267, ಅಮೆರಿಕ- 6,347, ಜಪಾನ್- 4,701 ಮತ್ತು ಉಕ್ರೇನ್ ಮೇಲೆ 3,708 ಬಾರಿ ದಾಳಿಗಳು ನಡೆದಿವೆ.

ಹ್ಯಾಕರ್ ಗಳು ಯಾವ ಮಾದರಿಯಲ್ಲಿ ದಾಳಿ ನಡೆಸುತ್ತಾರೆ, ಅವರು ಯಾವ ಮಾಹಿತಿಯನ್ನು ಕದಿಯುತ್ತಾರೆ. ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಹನಿಪಾಟ್ ಕಲೆಹಾಕುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...