alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದ ವಧು-ಭಾರತದ ವರ: ಮದುವೆಗೆ ಕಗ್ಗಂಟಾಗಿದೆ ವೀಸಾ

Hispanic couple holding hands on beach

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ಜೋದ್ಪುರ ಕುಟುಂಬವೊಂದರ ಗೊಂದಲಕ್ಕೆ ಕಾರಣವಾಗಿದೆ. ಇಲ್ಲಿನ ಹುಡುಗನಿಗೆ ಹಾಗೂ ಕರಾಚಿ ವೈದ್ಯರ ಮಗಳಿಗೆ ಮದುವೆ ನಿಶ್ಚಯವಾಗಿದೆ. ಮುಂದಿನ ತಿಂಗಳು ನಡೆಯಬೇಕಾಗಿದ್ದ ಮದುವೆಗೆ ಇನ್ನೂ ವೀಸಾ ಸಿಕ್ಕಿಲ್ಲ.

ಜೋದ್ಪುರದ ವ್ಯಾಪಾರಿಯೊಬ್ಬರ ಮಗನ ಮದುವೆ ನವೆಂಬರ್ 7 ರಂದು ಜೋದ್ಪುರದಲ್ಲಿ ನಡೆಯಲಿದೆ. ಮದುವೆಗೆ ಎಲ್ಲ ತಯಾರಿ ಪೂರ್ಣಗೊಂಡಿದೆ. ಕರಾಚಿಯಲ್ಲಿರುವ ವೈದ್ಯರ ಕುಟುಂಬ ಜೋದ್ಪುರಕ್ಕೆ ಬರಬೇಕಾಗಿದೆ. ಆದ್ರೆ ಆ ಕುಟುಂಬಕ್ಕೆ ಇನ್ನೂ ವೀಸಾ ಸಿಕ್ಕಿಲ್ಲ. ನಿಗದಿಪಡಿಸಿದ ದಿನಾಂಕದಂದು ಮದುವೆ ನಡೆಯುತ್ತಾ ಇಲ್ವಾ ಎಂಬ ಗೊಂದಲ ಕುಟುಂಬದವರನ್ನು ಕಾಡ್ತಾ ಇದೆ.

ಮೂರು ತಿಂಗಳ ಹಿಂದೆ ವಧು ಕುಟುಂಬದ 15 ಮಂದಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಈವರೆಗೂ ವೀಸಾ ಸಿಕ್ಕಿಲ್ಲ. ವೀಸಾಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಲಾಗ್ತಾ ಇದೆ. ಮದುವೆ ದಿನಾಂಕ ಹತ್ತಿರ ಬರ್ತಾ ಇದ್ದು, ಎಲ್ಲ ಸರಿ ಹೋಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ ವರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...