alex Certify
ಕನ್ನಡ ದುನಿಯಾ       Mobile App
       

Kannada Duniya

ಫಲ ನೀಡದ ಎನ್.ಎಸ್.ಜಿ. ಸದಸ್ಯತ್ವ ಪ್ರಯತ್ನ

nsg-kl

ಸಿಯೋಲ್: ಪರಮಾಣು ಪೂರೈಕೆದಾರರ ಒಕ್ಕೂಟ(ಎನ್.ಎಸ್.ಜಿ.)ದಲ್ಲಿ ಸದಸ್ಯತ್ವ ಪಡೆಯಬೇಕೆಂಬ ಭಾರತದ ಕನಸಿಗೆ ಹಿನ್ನಡೆಯಾಗಿದೆ. 

ಎನ್.ಎಸ್.ಜಿ. ವಿಶೇಷ ಅಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವ ನೀಡಲು ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಚೀನಾ, ಬ್ರೆಜಿಲ್, ಆಸ್ಟ್ರಿಯಾ, ಟರ್ಕಿ, ನ್ಯೂಜಿಲೆಂಡ್ ಐರ್ಲೆಂಡ್ ದೇಶಗಳು ಭಾರತಕ್ಕೆ ಸದಸ್ಯತ್ವ ನೀಡಲು ವಿರೋಧ ವ್ಯಕ್ತಪಡಿಸಿವೆ. ಹೀಗೆ ವಿರೋಧ ವ್ಯಕ್ತವಾಗಲು ಭಾರತ ಎನ್.ಪಿ.ಟಿ.ಗೆ ಸಹಿ ಮಾಡದಿರುವುದೇ ಕಾರಣ ಎನ್ನಲಾಗಿದೆ. ಈ ಅಧಿವೇಶನಕ್ಕೆ ಮೊದಲು ಪ್ರಧಾನಿ ಮೋದಿ ಅವರು, ತಾಷ್ಕೆಂಟ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗಿ ಸಹಕಾರ ಕೋರಿದ್ದರು.

ಆದರೂ, ಸಿಯೋಲ್ ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವ ನೀಡಲು ಚೀನಾ, ಐರ್ಲೆಂಡ್, ಬ್ರೆಜಿಲ್ ಮೊದಲಾದ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಇದರಿಂದಾಗಿ ಪರಮಾಣು ಪೂರೈಕೆದಾರರ ಒಕ್ಕೂಟದಲ್ಲಿ ಸದಸ್ಯತ್ವ ಪಡೆಯಬೇಕೆಂಬ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಸೇರಬೇಕೆನ್ನುವ ಭಾರತದ ಪ್ರಯತ್ನಕ್ಕೆ ಅಮೆರಿಕ, ಫ್ರಾನ್ಸ್, ಮೆಕ್ಸಿಕೋ, ಸೇರಿದಂತೆ 42 ದೇಶಗಳು ಸಹಮತ ಸೂಚಿಸಿವೆ. ಸಿಯೋಲ್ ನಲ್ಲಿ ನಡೆದ ಮೊದಲ ದಿನದ ಸಭೆಯಲ್ಲಿ ಭಾರತಕ್ಕೆ ಹಿನ್ನಡೆಯಾಗಿದ್ದರೂ, ಶುಕ್ರವಾರ ಮತ್ತೊಮ್ಮೆ ಸಭೆ ಸೇರಿ ವಿರೋಧ ವ್ಯಕ್ತಪಡಿಸುತ್ತಿರುವ ರಾಷ್ಟ್ರಗಳ ಮನವೊಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...