alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾಕ್ಕೆ ಭಾರತ ತಿರುಗೇಟು: ಸರಕುಗಳ ಮೇಲಿನ ಸುಂಕ ಹೆಚ್ಚಳಕ್ಕೆ ತೀರ್ಮಾನ

ಭಾರತದ ಉಕ್ಕು ಮತ್ತು ಅಲ್ಯುಮಿನಿಯಮ್ ನ ಕೆಲ ಉತ್ಪನ್ನಗಳ ಆಮದಿನ ಮೇಲೆ ಸುಂಕ ಹೆಚ್ಚಿಸುವ ಮೂಲಕ ಭಾರತಕ್ಕೆ 1614 ಕೋಟಿ ರೂ. ನಷ್ಟ ಉಂಟು ಮಾಡಿರುವ ಅಮೆರಿಕಾಕ್ಕೆ ತಿರುಗೇಟು ನೀಡಲು ಭಾರತ ಸಜ್ಜಾಗಿದೆ.

ಮೋಟಾರ್ ಸೈಕಲ್, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನ, ಬೋರಿಕ್ ಆಸಿಡ್ ಸೇರಿದಂತೆ ಅಮೆರಿಕಾದ 30 ಸರಕುಗಳ ಆಮದಿನ ಮೇಲೆ ಶೇಕಡ 50 ರಷ್ಟು ಶುಲ್ಕ ವಿಧಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಅಮೆರಿಕಾಕ್ಕೂ ಅಷ್ಟೇ ಪ್ರಮಾಣದ ನಷ್ಟವಾಗಲಿದೆ.

ಅಮೆರಿಕಾದ 30 ಸರಕುಗಳ ಮೇಲಿನ ಸುಂಕ ಹೆಚ್ಚಳದ ಪರಿಷ್ಕೃತ ಪಟ್ಟಿಯನ್ನು ಭಾರತ ಈಗಾಗಲೇ ವಿಶ್ವ ವ್ಯಾಪಾರ ಸಂಘಟನೆಗೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಇದು ಜಾರಿಗೆ ಬರುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...